ಗಂಗೊಳ್ಳಿ: ಉಡುಪಿ ಜಿಲ್ಲೆಯ ಗಂಗೊಳ್ಳಿ ವ್ಯಕ್ತಿಯೊಬ್ಬರ ಮೇಲೆ ಕೋಲಿನಿಂದ ಇಬ್ಬರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಲ್ಲೆಯಾದ ವ್ಯಕ್ತಿ ರಜ್ಜಬ್ ಬೂಡಾ ಎಂದು ತಿಳಿಯಲಾಗಿದೆ.
ಹಲ್ಲೆಗೈದ ಆರೋಪಿಗಳು ಸಲಾಂ ಮತ್ತು ಮುನೀರ್ ಎಂದು ಗುರುತಿಸಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರೆಸಿದ್ದಾರೆ.
ಪ್ರಕರಣದ ವಿವರ : ಗಂಗೊಳ್ಳಿಯನ್ Whatsapp ಗ್ರೂಪಿನಲ್ಲಿ ಈ ಹಿಂದೆ ಪಿಯಾ೯ದಿದಾರ ರಜ್ಜಬ್ ಬೂಡಾ ಪ್ರಾಯ 42 ವರ್ಷ ತಂದೆ: ಬಿ ಅಮೀದ್ ಸಾಹೇಬ್ ವಾಸ: ಜುಮ್ಮಾ ಮಸೀದಿ ಬಳಿ ಗಂಗೊಳ್ಳಿ ಗ್ರಾಮ ಇವರು ಮತ್ತು ಆರೋಪಿಗಳಾದ ಸಲಾಂ ಹಾಗೂ ಮುನೀರ್ ಎಂಬವರು ಇದ್ದು ಪ್ರಸ್ತುತ ಪಿಯಾ೯ದಿದಾರರು ಗ್ರೂಪಿನಿಂದ ಹೊರ ಬಂದಿರುತ್ತಾರೆ. ದಿನಾಂಕ:11/11/2025 ರ ರಾತ್ರಿ 10.00 ಗಂಟೆಗೆ ಮುಬಾರಕ್ ಮೊಹಲ್ಲಾದ ಬಳಿ ಪಿಯಾ೯ದಿದಾರರು ಖಲೀಲ್ ರವರೊಂದಿಗೆ ಖಲೀಲ್ ರವರ ಜಾಗದ ಹತ್ತಿರ ಇದ್ದ ಸಮಯ ಆರೋಪಿಗಳಾದ ಸಲಾಂ ಮತ್ತು ಮುನೀರ್ ರವರುಗಳು ಏಕಾಏಕಿ ಬೈದು ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದಾಗ ಸಲಾಂರವರು ಪ್ರಶ್ನಿಸಿದ್ದು ಆಗ ಆರೋಪಿಗಳು ಪಿಯಾ೯ದಿದಾರರಲ್ಲಿ ನಾವು ಗಂಗೊಳ್ಳಿ ಸ್ಟೇಷನ್‌ನಲ್ಲಿ ಮಹಮ್ಮದ್ ಪೈಗಂಬರ್ ರವರಿಗೆ ಅವಹೇಳನ ಮಾಡಿದ ವಿಚಾರದಲ್ಲಿ ಕೇಸು ಕೊಟ್ಟಿರುತ್ತೇವೆ ನೀವು ಯಾಕೆ ಕೊಡಲಿಲ್ಲ ಎಂದು ಬೆದರಿಸಿ ಹೋಗಿದ್ದು, ಆರೋಪಿಗಳ ಹೋದ ನಂತ್ರ ಪಿಯಾ೯ದಾರರು ಆರೋಪಿ ಸಲಾಂರವರಿಗೆ ಪೋನ್ ಮಾಡಿ ನೀವು ಯಾಕೆ ಎಲ್ಲಾ ಕಡೆ ನನಗೆ ಬೆದರಿಸುತ್ತಿದ್ದೀರಿ ಎಂದು ವಿಚಾರಿಸಿದಾಗ ಆರೋಪಿಗಳು ರಾತ್ರಿ 11.00 ಗಂಟೆಗೆ ವಾಪಾಸ್ ಮೇಲಿನ ಸ್ಥಳಕ್ಕೆ ಬಂದು ಆರೋಪಿ ಸಲಾಂನು ಪಿಯಾ೯ದಾರರಿಗೆ ಕೋಲಿನಿಂದ ಸೊಂಟಕ್ಕೆ ಎಡಕೈಗೆ ಹೊಡೆದಿದ್ದು ಆರೋಪಿ ಮುನೀರನು ಕೈಯಿಂದ ಗುದ್ದಿದ್ದಲ್ಲದೇ ನಿಮ್ಮನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.
ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ : 110/2025 ಕಲಂ: 352 351 (2) 115 (2) 118 (1) 3 (5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.



