ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಆಸ್ಟ್ರೋ ಮೋಹನ್ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.
ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಅಲೆವೂರು ರಾಜೇಶ ಶೆಟ್ಟಿ, ಹಿರಿಯ ಛಾಯಾಗ್ರಾಹಕ ಆಸ್ಟ್ರೋ ಮೋಹನ್, ಹಿರಿಯ ವರದಿಗಾರ ಬಾಲಕೃಷ್ಣ ಪೂಜಾರಿ ಸ್ಪರ್ಧಿಸಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಸಹಿತ ಬಹುತೇಕ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.
ಜಿಲ್ಲೆಯ 161 ಮತದಾರರ ಪೈಕಿ 141(ಶೇ.87.57) ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆಸ್ಟ್ರೋ ಮೋಹನ್ 85, ಬಾಲಕೃಷ್ಣ ಪೂಜಾರಿ 41, ರಾಜೇಶ ಶೆಟ್ಟಿ 14, ಒಂದು ಮತ ಅಸಿಂಧು ಆಗಿದೆ.



