ಯುವ ವಿಚಾರ ವೇದಿಕೆ (ರಿ.) ಉಪ್ಪೂರು ಕೊಳಲಗಿರಿ ಇವರ ವತಿಯಿಂದ…
ಬ್ರಹ್ಮಾವರ: ಯುವ ವಿಚಾರ ವೇದಿಕೆಯ ಸ್ವಾತಂತ್ರೋತ್ಸವ ಪ್ರಯುಕ್ತ ಮನೋರಂಜನ ಕ್ರೀಡಾ ಸ್ಪರ್ಧಾ ಕಾರ್ಯಕ್ರಮ ವೇದಿಕೆ ವಠಾರದಲ್ಲಿ ನಡೆಸಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಕೃಷಿಕರು, ಉದ್ಯಮಿ , ಧಾರ್ಮಿಕ ಚಿಂತಕರು , ಅಮ್ಮುಂಜೆ ಬಬ್ಬುಸ್ವಾಮಿ ದೈವಸ್ಥಾನದ ಮೊಕ್ತೇಸರರಾದ ಶ್ರೀ . ಪ್ರಶಾಂತ್ ಶೆಟ್ಟಿ ಅಮ್ಮುಂಜೆ ಉಪಸ್ಥಿತರಿದ್ದು ಯುವ ಜನತೆ ಇದರಲ್ಲಿ ಭಾಗಿಯಾಗಬೇಕು ಆಚಾರ ವಿಚಾರ ಸಂಸ್ಕೃತಿಗಳ ಮನನ ಮಾಡಿಕೊಳ್ಳಬೇಕು. ಯುವ ವಿಚಾರ ವೇದಿಕೆಯ ನಿರಂತರ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ರಮೇಶ್ ಕರ್ಕೇರ ಉಗ್ಗೆಲ್ಬೆಟ್ಟು, ಅಮ್ಮುಂಜೆ ಕ್ರಿಕೆಟ್ ಕ್ಲಬ್ ನ ACA ಅಧ್ಯಕ್ಷರಾದ ರಿಚಾರ್ಡ್ ಡಿಸೋಜಾ ಅತಿಥಿಗಳಾಗಿ ಉಪಸ್ಥಿತರಿದ್ದರು.
ರಜತ ಸಂಭ್ರಮವನ್ನು ಕಂಡ ಸಂಘದ ಚಟುವಟಿಕೆಗಳ ಕಾರ್ಯ ಸಾಧನೆಗಳನ್ನು ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಸಂದೀಪ್ ಶೆಟ್ಟಿ ವಹಿಸಿದ್ದರು. ಅತಿಥಿಗಳಿಂದ ಸಂಘದ ಅಧ್ಯಕ್ಷರಿಗೆ ಸ್ಪರ್ಧಾ ಪರಿಕರ ಹಸ್ತಾಂತರ ಹಾಗೂ ಲೋಟಕ್ಕೆ ಚೆಂಡೆಸೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮಕ್ಕಳಿಗೆ, ಮಹಿಳೆಯರು, ಪುರುಷರಿಗೆ ವಿವಿಧ ಪ್ರತ್ಯೇಕ ಸ್ಪರ್ಧೆಗಳನ್ನು ನೆರವೇರಿಸಲಾಯಿತು. ವಿಶೇಷವಾಗಿ ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆ ಕೂಡ ನಡೆಸಲಾಯಿತು.
ಮಹಿಳೆಯರಿಗೆ ಮತ್ತು ಪುರುಷರಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಕುತೂಹಲದ ಸ್ಪರ್ಧೆಯು ಮನೋರಂಜನ ಸ್ಪರ್ಧೆಯಾಗಿ ಎಲ್ಲರ ಮನರಂಜಿಸಿತು.
ಸಭಾ ವೇದಿಕೆಯ ಕಾರ್ಯಕ್ರಮವು ಜಯಲಕ್ಷ್ಮೀ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ , ಅತಿಥಿ ಗಣ್ಯರಿಗೆ ಕೋಶಾಧಿಕಾರಿ ಅಶೋಕ್ ರವರು ಸ್ವಾಗತಿಸಿ , ಕ್ರೀಡಾ ಕಾರ್ಯಕ್ರಮದ ಉಸ್ತುವಾರಿಯಾಗಿದ್ದ ಹೇಮಂತ್ ಸರ್ವರಿಗೂ ಧನ್ಯವಾದ ಸಲ್ಲಿಸುವುದರೊಂದಿಗೆ ಮುಕ್ತಾಯಗೊಂಡಿತು. ಶಾಂತಾ ಸೆಲ್ವರಾಜ್ ರವರು ತುಳು ಭಾಷೆಯಲ್ಲಿ ಮಾತಿನ ಮೆರುಗಿನ ವಿಭಿನ್ನ ನಿರೂಪಣೆ ಮುಖಾಂತರ ಕಾರ್ಯಕ್ರಮ ನಿರೂಪಿಸಿದರು.







