ಉಡುಪಿ: ಡೀಸೆಲ್ ತುಂಬಿಸಿಕೊಂಡು ಕಾರು ಪರಾರಿಯಾಗಿರುವ ಘಟನೆ ಉಡುಪಿಯ ಶಂಕರಪುರ ಸುಭಾಷ್ ನಗರದ ಇಂಡಿಯನ್ ಆಯಿಲ್ ಫಿಲ್ಲಿಂಗ್ ಸ್ಟೇಷನ್ನಲ್ಲಿ ನಡೆದಿದೆ.
ಬಿಳಿ ಬಣ್ಣದ ಫೋರ್ಡ್ ಇಕೋ ಸ್ಪೋರ್ಟ್ಸ್ ಕಾರ್ ನಲ್ಲಿ ಬಂದು ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿಕೊಂಡು ಖದೀಮರು ಪರಾರಿಯಾಗಿದ್ದಾರೆ. ಬಿಲ್ ಮಾಡುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು. ಯಾವುದೇ ಹಣ ಪಾವತಿ ಮಾಡದೆ ಪರಾರಿಯಾಗಿದ್ದಾರೆ.
ಅತಿ ವೇಗದಿಂದ ದುಷ್ಕರ್ಮಿಗಳು ಕಾರು ಓಡಿಸಿಕೊಂಡು ಹೋಗಿದ್ದಾರೆ. 4,711 ರೂಪಾಯಿ ಮೌಲ್ಯದ ಡೀಸೆಲ್ ತುಂಬಿಸಿಕೊಂಡಿದ್ದರು. ಕಾರಿನೊಳಗೆ ಮೂವರು ಯುವಕರಿದ್ದರು. ಅವರು ತುಳು ಭಾಷೆಯನ್ನು ಸರಾಗವಾಗಿ ಮಾತನಾಡುತ್ತಿದ್ದರು. ತಾವು ಕುಮಟಾದವರು ಎಂದು ಸುಳ್ಳು ಹೇಳಿರುವ ಶಂಕೆ ವ್ಯಕ್ತವಾಗಿದೆ.
ಮದ್ಯಪಾನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ವಾಹನದೊಳಗೆ ಬಿಯರ್ ಬಾಟಲ್ ಹಾಗೂ ಚಿಪ್ಸ್ ಇತ್ತು.ಕಾರಿಗೆ ಟೆಂಟ್ ಗ್ಲಾಸ್ ಅಳವಡಿಸಲಾಗಿತ್ತು. ಸಿಸಿಟಿವಿಯಲ್ಲಿ ಕಾರ್ ನಂಬರ್ ಪತ್ತೆಯಾಗಿಲ್ಲ. ಶಿರ್ವ ಪೊಲೀಸರಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ದೂರು ನೀಡಿದ್ದಾರೆ.




