Home Crime ಮಣಿಪಾಲ : ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ…!!

ಮಣಿಪಾಲ : ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ…!!

ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ವ್ಯಕ್ತಿಯೋರ್ವರು ಮನೆಯ ಬಳಿಯ ಕೊಟ್ಟಿಗೆಯ ಶೀಟಿನ ಕಬ್ಬಿಣದ ರಾಡ್‌ ಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದವರು ಅಂತೋನಿ ಜಾನ್ ಮಿನೆಜಸ್ ಎಂದು ತಿಳಿಯಲಾಗಿದೆ.

ಈ ಘಟನೆ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ತಕರಣದ ವಿವರ : ಪಿರ್ಯಾದಿದಾರರಾದ ಸುನೀತ್‌ ಮಿನೆಜಸ್‌ (47), ಮರ್ಣೆ ಗ್ರಾಮ ಉಡುಪಿ ಇವರ ಗಂಡ ಅಂತೋನಿ ಜಾನ್‌ ಮಿನೆಜಸ್‌ (55) ರವರು ಈ ಹಿಂದೆ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ಕೊರೊನಾ ಸಮಯದಲ್ಲಿ ಅವರನ್ನು ಕೆಲಸದಿಂದ ತೆಗೆದಿದ್ದರಿಂದ ಊರಿಗೆ ಬಂದಿದ್ದು ಇಲ್ಲಿಯೂ ಕೂಡಾ ಸರಿಯಾಗಿ ಕೆಲಸ ಇಲ್ಲದೇ ಇದ್ದುದರಿಂದ ಮಕ್ಕಳ ಫೀಸ್‌ ಕಟ್ಟಲು ಕಷ್ಟಪಡುತ್ತಿದ್ದು, ಈ ಬಗ್ಗೆ ಮನಸಿಲ್ಲದಿದ್ದರೂ ಜಾಗವನ್ನು ಮಾರಾಟ ಮಾಡುವ ಯೋಚನೆ ಮಾಡಿಕೊಂಡಿದ್ದು ಅದೇ ಕಾರಣದಿಂದ ಮನನೊಂದು ದಿನಾಂಕ 28/10/2025 ರಂದು ಬೆಳಿಗ್ಗೆ ಸುಮಾರು 10:10 ಗಂಟೆ ಸಮಯಕ್ಕೆ ಉಡುಪಿ ತಾಲೂಕು ಮರ್ಣೆ ಗ್ರಾಮದ ಕುಕ್ಕುಪಲ್ಕೆ ಎಂಬಲ್ಲಿ ಇರುವ ತನ್ನ ಮನೆಯ ಬಳಿಯ ಕೊಟ್ಟಿಗೆಯ ಶೀಟಿನ ಕಬ್ಬಿಣದ ರಾಡ್‌ ಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿ ಅಸ್ವಸ್ಥಗೊಂಡು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 07/11/2025 ರಂದು ಬೆಳಿಗ್ಗೆ 02:10 ಗಂಟೆಗೆ ಮೃತಪಟ್ಟಿರುವುದಾಗಿ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 43/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.