Home Crime ಕೊಲ್ಲೂರು : ಯುವಕನೋರ್ವ ಗೇರು‌ ಮರಕ್ಕೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ…!!

ಕೊಲ್ಲೂರು : ಯುವಕನೋರ್ವ ಗೇರು‌ ಮರಕ್ಕೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ…!!

ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ಯುವಕನೋರ್ವ ಹಾಡಿಯ ಗೇರು ಮರಕ್ಕೆ ಹಗ್ಗದ ಸಹಾಯದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕ ಕಾರ್ತಿಕ್ ಎಂದು ತಿಳಿಯಲಾಗಿದೆ.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾದಿದಾರರಾದ ರಾಘವೇಂದ್ರ (40), ಬೆಳ್ಳಾಲ ಗ್ರಾಮ ಕುಂದಾಪುರ ಇವರ ಅಕ್ಕನ ಮಗ ಕಾರ್ತಿಕ್‌‌‌ (29) ಎಂಬಾತನು ಸರಿಯಾಗಿ ಕೆಲಸಕ್ಕೆ ಹೋಗದೇ ದಿನವಿಡಿ ಮೊಬೈಲ್‌‌‌‌ ನೊಂದಿಗೆ ಅಡವಾಟಿಕೊಂಡು ದಿನ ಕಳೆಯುತ್ತಿದ್ದು, ಈ ಬಗ್ಗೆ ಅವನ ತಂದೆ, ತಾಯಿ ಹಾಗೂ ಸಂಬಂಧಿಕರು ಬುದ್ದಿಮಾತು ಹೇಳಿದರೂ ಕೇಳುತ್ತಿರುವುದಿಲ್ಲ. ವಿಪರೀತ ಮೊಬೈಲ್‌‌‌‌‌‌‌‌‌‌‌‌‌‌ ನೋಡುವ ಚಾಳಿಯಿಂದ ಯಾರೊಂದಿಗೂ ಮಾತನಾಡದೇ ಮಂಕಾಗಿ ಇರುತ್ತಿದ್ದು, ದಿನಾಂಕ 04/11/2025 ರಂದು ರಾತ್ರಿ 8:30 ಗಂಟೆಯಿಂದ 9:00 ಗಂಟೆಯ ಅವಧಿಯಲ್ಲಿ ಕಾರ್ತಿಕ್‌ ನು ಸಂಬಂದಿಕರ ಹಾಡಿಯ ಗೇರು ಮರಕ್ಕೆ ಹಗ್ಗದ ಸಹಾಯದಿಂದ ನೇಣು ಬಿಗಿದುಕೊಂಡು ನೇತಾಡುತ್ತಿದ್ದು, ಇದನ್ನು ನೋಡಿದ ಪಿರ್ಯಾದಿದಾರರು ಹಾಗೂ ಇತರರು ಕಾರ್ತಿಕ್‌ ನನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 27/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.