ಬಜ್ಪೆ : ಪಟಾಕಿ ಅಂಗಡಿ ಮಾಲೀಕನನ್ನು ಬೆದರಿಸಿ ಪಟಾಕಿ ಲೂಟಿ ಮಾಡಿದ ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ರೌಡಿ ಶೀಟರ್ ಪ್ರಶಾಂತ್ ಕಳವಾರು ಯಾನೆ ಪಚ್ಚು, ಗಣೇಶ್ ಮತ್ತು ಅಶ್ವಿತ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಬಂಧಿತರ ಪೈಕಿ ಪ್ರಶಾಂತ್ ಕಳವಾರು ವಿರುದ್ಧ ಕೊಲೆ ಮತ್ತು ನಾಲ್ಕು ಕೊಲೆಯತ್ನ ಪ್ರಕರಣಗಳು ಸೇರಿದಂತೆ ತನಿಖೆ ಮತ್ತು ವಿಚಾರಣೆಯ ವಿವಿಧ ಹಂತದ 14 ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೋರ್ವ ಆರೋಪಿ ಗಣೇಶ್ ವಿರುದ್ಧ 4 ಪ್ರಕರಣಗಳಿವೆ, ಇದರಲ್ಲಿ ಎರಡು ಕೊಲೆಯತ್ನ ಪ್ರಕರಣಗಳು ತನಿಖೆ ಮತ್ತು ವಿಚಾರಣೆಯ ವಿವಿಧ ಹಂತದಲ್ಲಿವೆ. ಅಶ್ವಿತ್ ವಿರುದ್ಧ ಒಂದು ಪ್ರಕರಣವಿದ್ದು, ಅದನ್ನು ಖುಲಾಸೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.



