Home Art & Culture ಕೃಷ್ಣ ಮಠದಲ್ಲಿ ತುಳಸೀಪೂಜೆ, ಲಕ್ಷದಿಪೋತ್ಸವ ಮತ್ತು ರಥೋತ್ಸವ ಸಂಭ್ರಮ…!!

ಕೃಷ್ಣ ಮಠದಲ್ಲಿ ತುಳಸೀಪೂಜೆ, ಲಕ್ಷದಿಪೋತ್ಸವ ಮತ್ತು ರಥೋತ್ಸವ ಸಂಭ್ರಮ…!!

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಸೋಮವಾರ ತುಳಸೀಪೂಜೆ, ಲಕ್ಷದೀಪೋತ್ಸವ ಮತ್ತು ರಥೋತ್ಸವ ಸಂಭ್ರಮದಿಂದ ನಡೆಯಿತು.

ಮಧ್ಯಾಹ್ನ ರಥಬೀದಿಯಲ್ಲಿ ಲಕ್ಷ ದೀಪೋತ್ಸವಕ್ಕಾಗಿ ಹಣತೆಯನ್ನಿಡುವ ಕಾರ್ಯಕ್ಕೆ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು.

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ಕೃಷ್ಣಮಠದಲ್ಲಿ 1 ತಿಂಗಳ ಪರ್ಯಂತ ನಡೆದ ಪಶ್ಚಿಮ ಜಾಗರ ಪೂಜೆ ಸಂಪನ್ನಗೊಂಡಿತು. ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಮಠದ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಯಲ್ಲಿ ತುಳಸೀ ಪೂಜೆ ನೆರವೇರಿಸಿದರು.

ಸಾಯಂಕಾಲ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಕ್ಷೀರಾಬ್ಧಿ ಪೂಜೆ ನಡೆಯಿತು. ಪರ್ಯಾಯ ಉಭಯ ಶ್ರೀಗಳು ಕ್ಷೀರಾಬ್ಧಿ ಪ್ರದಾನ ಮಾಡಿದರು.