Home Crime ಕೊಲ್ಲೂರು : ಯುವಕರ ಮೇಲೆ ಹಲ್ಲೆ : ಪ್ರಕರಣ ದಾಖಲು…!!

ಕೊಲ್ಲೂರು : ಯುವಕರ ಮೇಲೆ ಹಲ್ಲೆ : ಪ್ರಕರಣ ದಾಖಲು…!!

ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ಇಬ್ಬರು ಯುವಕರ ಮೇಲೆ ಮೂರು ಮಂದಿ ಸೇರಿ ಹಲ್ಲೆ ನಡೆಸಿದ ಘಡ್ ನಡೆದಿದೆ.

ಕಾಂತೇಶ ಹಾಗೂ ಪ್ರವೀಣ್ ಎಂಬವರ ಮೇಲೆ ಹಲ್ಲೆ ನಡೆದಿದೆ.

ಹೇಮಂತ, ರಾಜೇಶ ಹಾಗೂ ಬಾಲಕೃಷ್ಣ ರವರು ಎಂಬವರು ಹಲ್ಲೆ ನಡೆಸಿದ್ದಾರೆ.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಫಿರ್ಯಾದಿ ಕಾಂತೇಶ (27) ಹೊಸ ನಗರ, ಶಿವಮೊಗ್ಗ ಇವರು ಕೊಲ್ಲೂರಿನ ವಿಧಾತ್ರಿ ಟೂರಿಷ್ಟ್‌ ಹೋಂ ನ ರೂಂ-ಬಾಯ್‌ ಆಗಿರುತ್ತಾರೆ. ದಿನಾಂಕ: 31-10-2025 ರಂದು ತಮ್ಮ ಸ್ನೇಹಿತರಾದ ಪ್ರವೀಣ್‌ ರೊಂದಿಗೆ ಕೊಲ್ಲೂರು ಯಮುನ ವಸತಿ ಗೃಹದ ಬಳಿ ಇರುವಾಗ ಬೆಳಿಗ್ಗೆ ಸುಮಾರು 8-00 ಗಂಟೆಗೆ ತಮ್ಮ ಹಾಗೂ ಯಮುನ ವಸತಿ ಗೃಹದ ರೂಂ ಬಾಯ್‌ ಮಹೇಂದ್ರರವರ ನಡುವೆ ಗ್ರಾಹಕರನ್ನು ಕರೆಯುವ ವಿಚಾರದಲ್ಲಿ ಪರಸ್ವರ ಜಗಳವಾಗಿ ಹೋಗಿರುತ್ತದೆ. ಇದಾದ ಬಳಿಕ ಯಮುನ ವಸತಿ ಗೃಹದ ಹೇಮಂತನು ನಾವಿದ್ದ ಸ್ಥಳಕ್ಕೆ ಬಂದು ಮೊದಲಿಗೆ ಪ್ರವೀಣ್‌ ರನ್ನು ಕರ ಕೊಂಡು ಬಳಿಕ ನಮ್ಮ ಲಾಡ್ಜ್‌ ಗೆ ಬರುವ ಗ್ರಾಹಕರನ್ನು ಕರಕೊಂಡು ಹೋಗುತ್ತಿಯಾ ಎಂದು ಹೇಳಿ ತಮ್ಮ ವಸತಿ ಗೃಹದ ಪಾರ್ಕಿಂಗ್ ಸ್ಥಳಕ್ಕೆ ಕರಕೊಂಡು ಹೋಗಿ ತಮಗಿಬ್ಬರಿಗೆ ಹೇಮಂತ, ರಾಜೇಶ ಹಾಗೂ ಬಾಲಕೃಷ್ಣ ರವರು ಕೈ ನಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಬಳಿಕ ಹೇಮಂತನು ಮರದ ಕೋಲಿನಿಂದ ತಲೆಗೆ ಹೊಡೆದಿರುತ್ತಾನೆ ಇದೇ ರೀತಿ ಮುಂದುವರೆದರೇ ಕೊಲ್ಲದೇ ಬಿಡುವುದಿಲ್ಲ ಎಂದು ಎಲ್ಲರೂ ಬೆದರಿಕೆ ಹಾಕಿರುತ್ತಾರೆ. ಇದರಿಂದ ಮೈ ಕೈಗೆ ತಲೆಗೆ ಎಡಕಾಲು ಗಂಟಿಗೆ ಒಳ ಜಖಂ ಆಗಿರುತ್ತದೆ ಹಾಗೂ ಪ್ರವೀಣನಿಗೆ ಬಲ ಕಾಲು ಒಳ ಜಖಂ ಆಗಿರುತ್ತದೆ. ಗಾಯಗೊಂಡ ಅವರನ್ನು ಕಾರ್ತಿಕ್‌ ರವರು ತಮ್ಮ ಕಾರಿನಲ್ಲಿ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕೊಂಡು ಹೋದಲ್ಲಿ ಪರೀಕ್ಷಿಸಿದ ಅಲ್ಲಿಯ ವೈದ್ಯರು ಒಳರೋಗಿ ಯಾಗಿ ದಾಖಲಿಸಿರುತ್ತಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2025 ಕಲಂ: 115(2), 118(1), 352, 351(2) ಜೊತೆಗೆ BNS 3(5) ರಂತೆ ಪ್ರಕರಣ ದಾಖಲಾಗಿರುತ್ತದೆ.