Home Crime ಬ್ರಹ್ಮಾವರ : ಯುವಕನೋರ್ವ ಬಾವಿಗೆ ಬಿದ್ದು ಸಾವು….!!

ಬ್ರಹ್ಮಾವರ : ಯುವಕನೋರ್ವ ಬಾವಿಗೆ ಬಿದ್ದು ಸಾವು….!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಯುವಕನೊಬ್ಬ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿ ಕಾರ್ತಿಕ್ ಎಂದು ತಿಳಿದು ಬಂದಿದೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಫಿರ್ಯಾದಿ ಸರಸ್ಪತಿ (43) 34 ನೇ ಕುದಿ ಗ್ರಾಮ, ಬ್ರಹ್ಮಾವರ ಇವರ ಮಗ ಕಾರ್ತಿಕ್ (24) ವರ್ಷ ಈತನು ವಿಪರಿತ ಕುಡಿತದ ಚಟ ಹೊಂದಿದ್ದು ದಿನಾಂಕ: 30.10.2025 ರಂದು ರಾತ್ರಿ 11:30 ಗಂಟೆಗೆ ಕಾರ್ತಿಕ್ ನು ವಿಪರೀತ ಮದ್ಯಸೇವನೆ ಮಾಡಿಕೊಂಡು ಮೋಟಾರು ಸೈಕಲ್ನಲ್ಲಿ ಪಿರ್ಯಾದಿದಾರರ ಮನೆಯ ಬಳಿ ಆಯತಪ್ಪಿ ಬಿದ್ದು ಕಾಲಿಗೆ ತರಚಿದ ಗಾಯವಾಗಿರುತ್ತದೆ ಪಿರ್ಯಾದಿದಾರರು ಮನೆಗೆ ಕರೆದುಕೊಂಡು ಬಂದಿದ್ದು ನಂತರ ಆತನು ಮನೆಯ ಹಿಂಭಾಗಕ್ಕೆ ಸೀಗರೇಟ್‌ ಸೇದಲು ಹೋದವನು ರಾತ್ರಿ 12:00 ಗಂಟೆಯ ಸಮಯದಲ್ಲಿ ಮನೆಯ ಹಿಂಭಾಗದ ಬಾವಿಯಲ್ಲಿ ಏನೋ ಬಿದ್ದ ಶಬ್ದ ಕೇಳಿ ಪಿರ್ಯಾದಿದಾರರು ಹೊರಗಡೆ ಬಂದು ನೋಡಿದಾಗ ಕಾರ್ತಿಕನು ಇರಲಿಲ್ಲ ದಿನಾಂಕ:31.10.2025 ಬೆಳಿಗ್ಗೆ 06:30 ಗಂಟೆಗೆ ಬಾವಿಯಲ್ಲಿ ನೋಡಿದಾಗ ಬಾವಿಯಲ್ಲಿ ಕಾರ್ತಿಕ್ ನು ತೇಲಡುತ್ತಿರುವುದನ್ನು ಪಿರ್ಯಾದಿದಾರರು ನೋಡಿರುತ್ತಾರೆ ಪಿರ್ಯಾದಿದಾರರ ಮಗ ಕಾರ್ತಿಕನಿಗೆ ವಿಪರೀತ ಕುಡಿತದ ಚಟದಿಂದ ಮಾನಸಿಕವಾಗಿ ಕುಗ್ಗಿ ಹೋಗಿ ಅಥವಾ ಇನ್ಯಾವುದೋ ಕಾರಣದಿಂದ ದಿನಾಂಕ:30.10.2025 ರಾತ್ರಿ 12:00 ಗಂಟೆಯಿಂದ ದಿನಾಂಕ: 31.10.2025 ರಂದು ಬೆಳಿಗ್ಗೆ 06:30 ಗಂಟೆಯ ಮಧ್ಯವದಿಯಲ್ಲಿ ಮನೆಯ ಹಿಂಭಾಗದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯು.ಡಿ.ಆರ್ 75/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.