ಮಲ್ಪೆ: ಬಂದರಿನಲ್ಲಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಕನ್ನಿ ಮೀನುಗಾರರ ಸಂಘ ( ರಿ) ಮಲ್ಪೆ. ಇದರ ಮುಂದಿನ ಸಾಲಿನ ಆಡಳಿತ ಮಂಡಳಿಗೆ ಮೊತ್ತ ಮೊದಲನೆಯವರಾಗಿ ಸತತ ನಾಲ್ಕನೇ ಬಾರಿಗೆ ದಯಕರ್ ವಿ ಸುವರ್ಣ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.
ದಯಕರ್ ವಿ ಸುವರ್ಣ ರವರಿಗೆ ತುಂಬು ಹೃದಯದ ಕೃತಜ್ಞತೆಗಳು. ಕಳೆದ ಹಲವು ವರ್ಷಗಳಿಂದ ಸಂಘವನ್ನು ಉನ್ನತ ಮಟ್ಟದಲ್ಲಿ ನಡೆಸಿಕೊಂಡು ಅಭಿವೃದ್ಧಿಯ ಪಥದಲ್ಲಿ ಸಾಗಿ ಕೊಂಡು ಬಂದರಿನಲ್ಲಿ ಒಂದು ಪ್ರತಿಷ್ಠಿತ ಸಂಘವಾಗಿ ರೂಪುಗೊಂಡು ಅದಲ್ಲದೆ ಎಲ್ಲಾ ಪ್ರಮುಖರೊಟ್ಟಿಗೆ ಮತ್ತು ಸದಸ್ಯರೊಟ್ಟಿಗೆ ಉತ್ತಮ ಬಾಂಧವ್ಯದೊಂದಿಗೆ ಇದ್ದು ಸದಸ್ಯರಿಗೆ ಸಂಘದಿಂದ ಸಿಗುವ ಆರೋಗ್ಯ ನಿಧಿ, ದುರಂತ ಪರಿಹಾರ ನಿಧಿ, ವಿಮೆ ಯೋಜನೆ ಇನ್ನಿತರ ಯಾವುದೇ ಸೌಲಭ್ಯ ಸಿಗುವಲ್ಲಿ ಪ್ರಮುಖ ಪಾತ್ರವಹಿಸಿದ ಹಾಗೂ ಸಂಘದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಹಲವಾರು ಧಾರ್ಮಿಕ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದರಿನಲ್ಲಿರುವ ಎಲ್ಲಾ ಸಂಘದವರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ಇದ್ದು ಮಲ್ಪೆ ಮೀನುಗಾರ ಸಂಘದ ಜೊತೆಯಲ್ಲಿ ಬಂದರಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ತಮ್ಮ ಸಂಘವನ್ನು ತೊಡಗಿಸಿಕೊಂಡು ತಮ್ಮ ಪ್ರತಿಷ್ಠಿತ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುವಲ್ಲಿ ಪ್ರಧಾನ ಪಾತ್ರವನ್ನು ವಹಿಸಿಕೊಂಡಿರುವ ಲವಲವಿಕೆಯ ಯುವ ನಾಯಕ ದಯಕರ್ ವಿ ಸುವರ್ಣ ರವರಿಗೆ ಮಗದೊಮ್ಮೆ ತುಂಬು ಹೃದಯದ ಕೃತಜ್ಞತೆಗಳು ಎಂದು ಮಲ್ಪೆ ಸಾರ್ವಜನಿಕ ತಿಳಿಸಿದ್ದಾರೆ.




