Home Crime ಬೆಳ್ತಂಗಡಿ : ಗೋಮಾಂಸ ಮಾಡುತ್ತಿದ್ದ ಶೆಡ್ ಮೇಲೆ ಪೊಲೀಸ್ ದಾಳಿ : ಇಬ್ಬರು ಆರೋಪಿಗಳ ಬಂಧನ…!!

ಬೆಳ್ತಂಗಡಿ : ಗೋಮಾಂಸ ಮಾಡುತ್ತಿದ್ದ ಶೆಡ್ ಮೇಲೆ ಪೊಲೀಸ್ ದಾಳಿ : ಇಬ್ಬರು ಆರೋಪಿಗಳ ಬಂಧನ…!!

ಬೆಳ್ತಂಗಡಿ : ಅಕ್ರಮವಾಗಿ ದನವನ್ನು ಕಳವು ಮಾಡಿಕೊಂಡು ಬಂದು ಗೋಮಾಂಸ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ. ದನದ ಮಾಂಸ ಮತ್ತು ಪರಿಕರಗಳನ್ನು ವಶಪಡಿಸಿಕೊಂಡ ಘಟನೆ ಸಂಭವಿಸಿದೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಚರ್ಚ್ ಬಳಿಯ ಖಾಸಗಿ ರಬ್ಬರ್ ತೋಟದ ಶೆಡ್ ಒಳಗಡೆ ಅಕ್ರಮವಾಗಿ ಜಾನುವಾರು ಕಡಿದು ಮಾಂಸ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಓಮನ ನೇತೃತ್ವದ ತಂಡ ಅ.27 ರಂದು ಮಧ್ಯಾಹ್ನ 2:30 ಕ್ಕೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ 91 ಕೆ.ಜಿ ದನದ ಮಾಂಸ ಮತ್ತು ಪರಿಕರಗಳನ್ನು ವಶಪಡಿಸಿಕೊಂಡಿದ್ದು. ಗೋಮಾಂಸ ಮಾಡುತ್ತಿದ್ದ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ನಿವಾಸಿ ಉಸ್ಮಾನ್ ಮಗ ಅಬ್ದುಲ್ ನಝೀರ್(36) ಮತ್ತು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಅಬ್ದುಲ್ ರಹುಮಾನ್ ಮಗ ಝಕಾರಿಯಾ(36) ಬಂಧಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುಬ್ಬಪುರ್ ಮಠ್ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಅನಂದ್.ಎಮ್ ಮತ್ತು ವೇಣೂರು ಸಬ್ ಇನ್ಸ್‌ಪೆಕ್ಟರ್ ಓಮನ ನೇತೃತ್ವದಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.