Home Crime ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚನೆ…!!

ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚನೆ…!!

ಉಡುಪಿ: ಬ್ಯಾಂಕ್ ಖಾತೆದಾರರ ಗಮನಕ್ಕೆ ಬಾರದೇ ಯಾವುದೇ ಹಣದ ವ್ಯವಹಾರ ನಡೆಸದೇ ಖಾತೆಯಿಂದ ಲಕ್ಷಾಂತರ ರೂ. ಹಣ ವರ್ಗಾವಣೆಯಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಶ್ ರಾವ್ ಜೂ.3ರಂದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ಆಸ್ಪತ್ರೆಯ ಬಿಲ್‌ಯನ್ನು ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದ್ದರು. ಇದಾದ ಮೇಲೆ ಯಾವುದೇ ಹಣದ ವ್ಯವಹಾರವನ್ನು ನಡೆಸದೇ ಇದ್ದು, ಜೂ.8ರಂದು ಹಣ ಕಡಿತಗೊಂಡಿರುವ ಬಗ್ಗೆ ಸಂದೇಶ ಬಂದಿದೆ. ಈ ಬಗ್ಗೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದ್ದು, ಜೂ.5ರಿಂದ ಜೂ. 8ರ ಮಧ್ಯಾವಧಿಯಲ್ಲಿ ಗಮನಕ್ಕೆ ಬಾರದೇ ಒಟ್ಟಾರೆ 2,12,497 ರೂ. ಯಾವುದೋ ಖಾತೆಗೆ ವರ್ಗಾವಣೆಯಾಗಿದೆ.