Home Kundapura News ವಿಶ್ವ ತಂಬಾಕು ನಿಷೇದ ದಿನಾಚರಣೆಯ ಪ್ರಯುಕ್ತ ಮಾಹಿತಿ ಕಾರ್ಯಕ್ರಮ

ವಿಶ್ವ ತಂಬಾಕು ನಿಷೇದ ದಿನಾಚರಣೆಯ ಪ್ರಯುಕ್ತ ಮಾಹಿತಿ ಕಾರ್ಯಕ್ರಮ

ಕುಂದಾಪುರ : ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಸಭಾ ಗ್ರಾಮ ಜೂನಿಯರ್ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ಬಾರ್ ಅಶೋಸಿಯೆಷನ್ (ರಿ.) ಅಭಿಯೋಗ ಇಲಾಖೆ, ಪೊಲೀಸ್ ಇಲಾಖೆ ವತಿಯಿಂದ ವಿಶ್ವ ತಂಬಾಕು ನಿಷೇದ ದಿನಾಚರಣೆಯ ಪ್ರಯುಕ್ತ ಮಾಹಿತಿ ಕಾರ್ಯಕ್ರಮ ನಡೆಯಿತು.

 

ಸದ್ರಿ ಕಾರ್ಯಕ್ರಮದಲ್ಲಿ ಶ್ರೀ ಅಬ್ದುಲ್ ರಹೀಮ್ ಹುಸೇನ್ ಶೇಕ್ ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಷರು ಕುಂದಾಪುರ, ಶ್ರೀ ಚಂದ್ರಶೇಖರ್ ಉಪ ಪ್ರಾಂಶುಪಾಲರು ಜೂನಿಯರ್ ಕಾಲೇಜು ಕುಂದಾಪುರ, ಶ್ರೀಮತಿ ಇಂದಿರಾ ನಾಯ್ಕ್ ಸರಕಾರಿ ಅಭಿಯೋಜಕರು ಕುಂದಾಪುರ, ಶ್ರೀ ಹೆಚ್. ಡಿ ಕುಲಕರ್ಣಿ ಡಿ. ವೈ. ಎಸ್. ಪಿ ಕುಂದಾಪುರ ಉಪವಿಭಾಗ, ಶ್ರೀ ಜಯರಾಮ ಡಿ. ಗೌಡ ಪೊಲೀಸ್ ನೀರಿಕ್ಷಕರು ಕುಂದಾಪುರ ಪೊಲೀಸ್ ಠಾಣೆ. ಶ್ರೀ ಜೆ. ಶ್ರೀನಾಥ್ ರಾವ್ ಅಧ್ಯಕ್ಷರು ಬಾರ್ ಅಸೋಸಿಯೇಷನ್ ಕುಂದಾಪುರ, ಶ್ರೀ ಡಾ. ಪ್ರೇಮಾನಂದ. ಕೆ ತಾಲೂಕು ಆರೋಗ್ಯ ಅಧಿಕಾರಿ ಕುಂದಾಪುರ ಹಾಗೂ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.