Home Crime ಅಕ್ರಮ ಸಂಬಂಧ ಶಂಕೆ : ಕೈಕಾಲು ಕಟ್ಟಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ…!!

ಅಕ್ರಮ ಸಂಬಂಧ ಶಂಕೆ : ಕೈಕಾಲು ಕಟ್ಟಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ…!!

ಔರಾದ್ : ಅಕ್ರಮ ಸಂಬಂಧ ಶಂಕೆ, ಮಹಾರಾಷ್ಟ್ರ ಮೂಲದ ಯುವಕನನ್ನು ಕೈ ಕಾಲು ಕಟ್ಟಿ ಮೇಲೆ ಮಾರಣಾಂತಿಕ ಹಲ್ಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ನಾಗನಪಲ್ಲಿ ಗ್ರಾಮದಲ್ಲಿ ಸಂಭವಿಸಿದೆ.

ಹಲ್ಲೆಗೊಳಾಗದ ಯುವಕ ನೆರೆಯ ಮಹಾರಾಷ್ಟ್ರ ಮೂಲದ ಗೌಣಗಾಂವ ಗ್ರಾಮದ ಯುವಕ ವಿಷ್ಣು ಬಾಬುರಾವ ಪಾಂಚಾಳ(27) ಎಂದು ತಿಳಿಯಲಾಗಿದೆ.

ಕಳೆದ ಎರಡು ವರ್ಷಗಳಿಂದ ನಾಗನಪಲ್ಲಿ ಗ್ರಾಮದ ಮಹಿಳೆ ಜೋತೆ ಪ್ರೀತಿಸಿ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹೈದರಾಬಾದ್ ನಗರದಲ್ಲಿ ಕೆಲಸಕ್ಕೆ ಇದ್ದ ಯುವಕ ತನ್ನ ಮನೆಯ ಪಕ್ಕದಲ್ಲಿರುವ ನಾಗನಪಲ್ಲಿ ಗ್ರಾಮದ ಮಹಿಳೆಯ ಜೋತೆ ಸಂಬಂಧ ಹೊಂದಿದ್ದ, ಅ.21ನೇ ತಾರೀಖು ಗ್ರಾಮಕ್ಕೆ ಬಂದಿದ್ದ ಯುವಕನನ್ನು ಜೆಜೆಎಮ್ ನಲ್ಲಿಗೆ ಕಟ್ಟಿದ ಮಹಿಳೆಯ ತಂದೆ ಅಶೋಕ ಹಾಗೂ ಸಹೋದರ ಗಜಾನನ ಎಂಬುವರು ದೊಣ್ಣೆಯಿಂದ ಹಿಗ್ಗಾಮುಗ್ಗ ಇಳಿಸಿದ್ದಾರೆ

ಗ್ರಾಮಸ್ಥರ ಸಮ್ಮುಖದಲ್ಲಿಯೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಷ್ಟೇ ಕಾಡಿಬೇಡಿದರು ಮನಬಂದಂತೆ ಬಡಿದು ಕ್ರೌರ್ಯ ಮೆರೆದಿದ್ದಾರೆ ಗ್ರಾಮಸ್ಥರ ಮೂಕ ಪ್ರೇಕ್ಷಕರಂತೆ ನೋಡಿದ್ದಾರೆ. ಗಾಯಗೊಂಡ ಯುವಕನನ್ನು ಬೀದರ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅತಿಯಾದ ಪೆಟ್ಟು ಬಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಅ.22ರಂದು ಮೃತಪಟ್ಟಿದ್ದಾನೆ.

ಯುವಕನಿಗೆ ಹಲ್ಲೆ ನಡೆಸಿದ ವಿಡಿಯೋ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು ವಿಡಿಯೋ ದೃಶ್ಯವಳಿ ಮೈಜುಮ್ಮನೆಸುವಂತಿದ್ದು ಅಮಾನವೀಯ ಕೃತ್ಯ ಎನಿಸಿದೆ. ಸುದ್ದಿ ತಿಳಿದಂತೆ ಚಿಂತಾಕಿ ಪಿಎ??? ಚಂದ್ರಕಾಂತ ನಿರ್ಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತ ಯುವಕ ವಿಷ್ಣು ಅವರ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಹಲ್ಲೆ ನಡೆಸಿದವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.