ಶಂಕರಪುರ : ಇನ್ನಂಜೆ ಗ್ರಾಮದ ಶಂಕರಪುರ ವಿಶ್ವಾಸದಮನೆ ಅನಾಥಾಶ್ರಮದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.
ಪ್ರೈಮ್ ಟಿವಿ ಆಡಳಿತ ನಿರ್ದೇಶನ ರೂಪೇಶ್ ವಿ.ಕಲ್ಮಾಡಿ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ರೂಪೇಶ್ ವಿ.ಕಲ್ಮಾಡಿ ಅವರ ಹುಟ್ಟುಹಬ್ಬವನ್ನು ಆಚರಿಸಿ, ಸಿಹಿ ತಿಂಡಿ ಹಂಚಲಾಯಿತು.
ವಿಶ್ವಾಸದ ಮನೆಯ ಮುಖ್ಯಸ್ಥ ಪಾಸ್ಟರ್ ಸುನೀಲ್ ಜಾನ್ ಡಿಸೋಜ, ವ್ಯವಸ್ಥಾಪಕ ಬಾಬು ಮ್ಯಾಥ್ಯೂ,ಸುಪ್ರಿತ ರೂಪೇಶ್, ಪ್ರೇಮ ಮಾರ್ಗರೆಟ್ ಉಪಸ್ಥಿತರಿದ್ದರು. ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.





















