Home Crime ಶಿರಿಯಾರ ಸೇವಾ ಸಹಕಾರಿ ಸಂಘದ ವಂಚನೆ ಪ್ರಕರಣ : ಓರ್ವ ವಶಕ್ಕೆ…!!

ಶಿರಿಯಾರ ಸೇವಾ ಸಹಕಾರಿ ಸಂಘದ ವಂಚನೆ ಪ್ರಕರಣ : ಓರ್ವ ವಶಕ್ಕೆ…!!

ಕೋಟ : ಉಡುಪಿ ಜಿಲ್ಲೆಯ ಜಿಲ್ಲೆಯ ಕೋಟದ ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಸಂಬಂಧಿಸಿದಂತೆ ವಂಚನೆ ಪ್ರಕರಣದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಸುರೇಶ್ ಭಟ್ ಎಂದು ತಿಳಿದು ಬಂದಿದೆ.

ಕೋಟ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ವಿವರ: ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 205/2025 ಕಲಂ: 318(3)(4) 112 ಜೊತೆಗೆ 3(5) ಬಿ.ಎನ್.ಎಸ್. 2023ರಂತೆ ದಾಖಲಾದ ಪ್ರಕರಣದಲ್ಲಿ ಶಿರಿಯಾರ ಸೇವಾ ಸಹಕಾರಿ ಸಂಘ, ಕಾವಡಿ ಶಾಖೆಯಲ್ಲಿ ಮ್ಯಾನೇಜರ್‌ ಆದ 1ನೇ ಆರೋಪಿ ಸುರೇಶ್‌ ಭಟ್‌ ಹಾಗೂ ಕಿರಿಯ ಗುಮಾಸ್ತನಾದ 2ನೇ ಆರೋಪಿ ಹರೀಶ್‌ ಕುಲಾಲ್‌ ಇವರುಗಳು ಸಂಘಕ್ಕೆ 1 ಕೋಟಿ 70 ಲಕ್ಷ ಹಣ ವಂಚಿಸಿ, ತಲೆಮರೆಸಿಕೊಂಡಿದ್ದ ಆರೋಪಿ ಸುರೇಶ ಭಟ್‌(38), ಗೇರು ಬೀಜ ಪ್ಯಾಕ್ಟರಿ ಬಳಿ, ಜಾನುವಾರಕಟ್ಟೆ, ಹೆಗ್ಗುಂಜೆ ಗ್ರಾಮ, ಬ್ರಹ್ಮಾವರ ತಾಲ್ಲೂಕು, ಉಡುಪಿ ಎಂಬಾತನನ್ನು ಪೊಲೀಸ್‌ ಉಪಾಧೀಕ್ಷಕರಾದ ಪ್ರಭು ಡಿ.ಟಿ. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ರವರ ಇವರ ಮಾರ್ಗದರ್ಶನದಲ್ಲಿ ಕೋಟಾ ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕರಾದ ಪ್ರವೀಣ ಕುಮಾರ್ ಆರ್. ಪಿ.ಎಸ್.ಐ. ( ಕಾ.&ಸು.) ಮಾಂತೇಶ್ ಜಾಭಗೌಡ, ಪಿ.ಎಸ್.ಐ. ( ತನಿಖೆ ) ಹಾಗೂ ಠಾಣಾ ಸಿಬ್ಬಂದಿಗಳಾದ ಸಿಹೆಚ್‌‌ಸಿ ಕೃಷ್ಣಶೇರೆಗಾರ, ಸಿಹೆಚ್‌‌ಸಿ ಶ್ರೀಧರ್, ಪಿಸಿ ವಿಜಯೇಂದ್ರ ಇವರುಗಳು ತಂಡ ದಸ್ತಗಿರಿ ಗೊಳಿಸಿರುತ್ತಾರೆ.