ಉಡುಪಿ ನಗರಸಭೆಯ ಕಲ್ಮಾಡಿ ವಾರ್ಡಿನಲ್ಲಿ ಸುಮಾರು 13 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಲ್ಮಾಡಿ ಪಾದೆ ಬಬ್ಬುಸ್ವಾಮಿ ಸಂಪರ್ಕ ರಸ್ತೆ ಕಾಮಗಾರಿಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.
ರಸ್ತೆ ಕಾಮಗಾರಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಕಳೆದ ಬಾರಿ ಬಬ್ಬು ಸ್ವಾಮಿ ದೈವಸ್ಥಾನದ ಸಮಗ್ರ ಜೀರ್ಣೋದ್ಧಾರದ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರ ಮನವಿಯಂತೆ 13 ಲಕ್ಷ ವೆಚ್ಚದಲ್ಲಿ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಕಲ್ಮಾಡಿ ವಾರ್ಡಿನ ಅಭಿವೃದ್ದಿಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಬಬ್ಬುಸ್ವಾಮಿ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಸುಂದರ ಜೆ. ಕಲ್ಮಾಡಿ, ಗುರಿಕಾರರಾದ ಮಾಧವ ಗುರಿಕಾರ, ಪ್ರಮುಖರಾದ ಜಯರಾಮ್ ಕಲ್ಮಾಡಿ, ರಮೇಶ್ ಮಾಸ್ಟರ್ ಕಲ್ಮಾಡಿ, ಜಯಶ್ರೀ ಅಶೋಕ್, ಸುರೇಶ್ ಕಲ್ಮಾಡಿ, ರೋಹಿತ್ ಕಲ್ಮಾಡಿ, ಅಶೋಕ್ ಸುವರ್ಣ, ವಿನೋದರ, ಮನೋಜ್ ಕುಮಾರ್ ಕಲ್ಮಾಡಿ, ಅಶೋಕ್ ಕುಮಾರ್, ಕಿಶೋರ್ ಮಲ್ಪೆ, ಸ್ಥಳೀಯ ಮುಖಂಡರಾದ ಶ್ರೀ ಲಕ್ಷ್ಮೀಶ, ಶ್ರೀ ವಿವೇಕ್ ಮೊದಲಾದವರು ಉಪಸ್ಥಿತರಿದ್ದರು.




