Home Latest ಪುತ್ತೂರು ಪುರುಷರಕಟ್ಟೆ ಘಟನೆಯಿಂದ ಆತಂಕಕ್ಕೆ ಒಳಗಾಗಿರುವ ಹಿಂದೂ ಯುವತಿಯ ಮನೆಗೆ ವಿಶ್ವ ಹಿಂದೂ ಪರಿಷತ್...

ಪುತ್ತೂರು ಪುರುಷರಕಟ್ಟೆ ಘಟನೆಯಿಂದ ಆತಂಕಕ್ಕೆ ಒಳಗಾಗಿರುವ ಹಿಂದೂ ಯುವತಿಯ ಮನೆಗೆ ವಿಶ್ವ ಹಿಂದೂ ಪರಿಷತ್ ನಿಯೋಗ ಭೇಟಿ..!!

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪುರುಷರಕಟ್ಟೆ ಘಟನೆಯಿಂದ ಆತಂಕಕ್ಕೆ ಒಳಗಾಗಿರುವ ಹಿಂದೂ ಯುವತಿಯ ಮನೆಗೆ ವಿಶ್ವ ಹಿಂದೂ ಪರಿಷತ್ ನಿಯೋಗ ಇಂದು ಭೇಟಿ ನೀಡಿ, ಪೋಷಕರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಲಾಯಿತು.

ಸಾರ್ವಜನಿಕವಾಗಿ ಆಯುಧ ಪ್ರದರ್ಶಿಸಿ ಯುವತಿಯರಲ್ಲಿ ಪ್ರಾಣಭಯ ಉಂಟುಮಾಡಿದ ಘಟನೆಯನ್ನು ಕೇವಲ ‘ತಪ್ಪು ಗ್ರಹಿಕೆ’ ಎಂದು ಬಿಂಬಿಸಿ, ಆರೋಪಿಗಳನ್ನು ರಕ್ಷಿಸಲು ನಡೆಯುತ್ತಿರುವ ರಾಜಕೀಯ ಸಂಧಾನದ ಪ್ರಯತ್ನವು ಸರಿಯಲ್ಲ.

ಈ ಘಟನೆಯ ಕುರಿತು ಪೊಲೀಸ್ ಇಲಾಖೆಯು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ನ್ಯಾಯಯುತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದ ಯುವತಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು. ಹಾಗೆಯೇ, ಸಂತ್ರಸ್ತ ಯುವತಿ ಮತ್ತು ಆಕೆಯ ಕುಟುಂಬದ ಮೇಲೆ ದಾಖಲಿಸಲಾಗಿರುವ ಸುಳ್ಳು ಪ್ರಕರಣವನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ವಿಶ್ವ ಹಿಂದೂ ಪರಿಷತ್ ಬಲವಾಗಿ ಆಗ್ರಹಿಸುತ್ತದೆ.