Home Latest ಎನ್.ಸಿ. ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಬಂಕೇರಕಟ್ಟ, ಅಂಬಲಪಾಡಿ ಇದರ ನೂತನ ಸಮಿತಿಯ...

ಎನ್.ಸಿ. ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಬಂಕೇರಕಟ್ಟ, ಅಂಬಲಪಾಡಿ ಇದರ ನೂತನ ಸಮಿತಿಯ ಪದಗ್ರಹಣ ಸಮಾರಂಭ…!!

ಅಂಬಲಪಾಡಿ, ಜೂನ್ 15: ಎನ್.ಸಿ. ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಬಂಕೇರಕಟ್ಟ, ಅಂಬಲಪಾಡಿ ಇದರ 2026-2028ನೇ ಸಾಲಿನ ನೂತನ ಸಮಿತಿಯ ಪದಗ್ರಹಣ ಸಮಾರಂಭವು ಜೂನ್ 14ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಿತು. ಈ ವೇಳೆ ಸಂಸ್ಥೆಯ ಮುಂದಿನ ಕಾರ್ಯಯೋಜನೆಗಳ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರೂಪೇಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ನೂತನ ಅಧ್ಯಕ್ಷರಾದ ಕಾರ್ತಿಕ್ ಪೂಜಾರಿ ಹಾಗೂ ನಾಗರಾಜ ಸೇವಾ ಸಮಿತಿಯ ನೂತನ ಅಧ್ಯಕ್ಷರಾದ ಶಿವಾಜಿ ಸನಿಲ್ ಅವರನ್ನು ಅಭಿನಂದಿಸಲಾಯಿತು.

ವಾರ್ಷಿಕೋತ್ಸವದ ಸಂದರ್ಭದಲ್ಲಿ ಅನುಪಸ್ಥಿತರಾಗಿದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಸಂಸ್ಥೆಯ ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಎಸ್. ಪೂಜಾರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ನವೀನ್ ಸುವರ್ಣ ಅವರು “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿದರು. ಸಮಿತಿಯ ನಿರ್ಣಯದಂತೆ ಜುಲೈ 5, 2026ರಂದು ಭಾನುವಾರ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ನಾಗರಾಜ ಸೇವಾ ಸಮಿತಿ ಹಾಗೂ ನಾಗರಾಜ ಮಹಿಳಾ ಸಮಿತಿಯ ಸಹಕಾರ ಪಡೆಯಲು ನಿರ್ಧರಿಸಲಾಯಿತು.

ಸಂಸ್ಥೆಯ ಗೌರವ ಸಲಹೆಗಾರ ರಾಜೇಶ್ ಸುವರ್ಣ ಅವರ ಸಲಹೆಯಂತೆ ಕಾರ್ಯಕ್ರಮಗಳ ಆಯೋಜನೆಗೆ ಅಗತ್ಯವಾದ ಹಣಕಾಸಿನ ವ್ಯವಸ್ಥೆಯನ್ನು ಸದಸ್ಯರು ತಮ್ಮ ಇಚ್ಛೆಯಂತೆ ಒದಗಿಸುವುದಾಗಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ಕಾರ್ಯಕ್ರಮಕ್ಕಾಗಿ ಅಗತ್ಯವಿರುವ ಗದ್ದೆಯ ವ್ಯವಸ್ಥೆಯನ್ನು ನಾಗರಾಜ ಸೇವಾ ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ಹೆಗ್ಡೆ ಅವರು ಮಾಡಿಕೊಡುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಆಯೋಜಿಸಲಾಗುವ ಮಾನ್ಸೂನ್ ಟ್ರೋಫಿ ಕುರಿತಂತೆ ಕೋಶಾಧಿಕಾರಿಗಳಾದ ಪ್ರಸನ್ನ ಶ್ರೀಯಾನ್ ಹಾಗೂ ಕಾರ್ತಿಕ್ ಪೂಜಾರಿ ಅವರು ಪ್ರಸ್ತಾಪಿಸಿದರು. ಮಾಜಿ ಅಧ್ಯಕ್ಷ ಕಿರಣ್ ಪೂಜಾರಿ ತಂಡದ ಬೆಳವಣಿಗೆ ಹಾಗೂ ಸಂಘಟನೆಯ ಬಲವರ್ಧನೆ ಕುರಿತು ಹಿತವಚನ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಲಿ ಅಧ್ಯಕ್ಷ ಕಾರ್ತಿಕ್ ಪೂಜಾರಿ ಅವರು ಸಂಸ್ಥೆಯ ಮುಂದಿನ ಚಟುವಟಿಕೆಗಳಿಗೆ ಎಲ್ಲ ಸದಸ್ಯರ ಸಹಕಾರ ಕೋರಿದರು. ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿ ಯತೀಶ್ ಸುವರ್ಣ ಅವರು ಧನ್ಯವಾದ ಸಮರ್ಪಿಸಿದರು.