Home Karavali Karnataka ಉಡುಪಿ: ಹೋಟೆಲ್ ಉದ್ಯಮಿ, ಖಾಸಗಿ ಬಸ್ ಮಾಲಕ ಸಂಜಯ್ ಶೆಟ್ಟಿ ನಿಧನ…!!

ಉಡುಪಿ: ಹೋಟೆಲ್ ಉದ್ಯಮಿ, ಖಾಸಗಿ ಬಸ್ ಮಾಲಕ ಸಂಜಯ್ ಶೆಟ್ಟಿ ನಿಧನ…!!

ಉಡುಪಿ: ಹೋಟೆಲ್ ಉದ್ಯಮಿ, ಪೂಂಜಾ ಟ್ರಾವಲ್ಸ್ ನ ಮಾಲೀಕ ಸಂಜಯ್ ಶೆಟ್ಟಿ ಕೊರಂಗ್ರಪಾಡಿ (65) ಅವರು ಅಲ್ಪಕಾಲದ ಅಸ್ವೌಖ್ಯದಿಂದ ಗುರುವಾರ (ಅ.23) ನಿಧನ ಹೊಂದಿದರು‌.

ಕೊರಂಗ್ರಪಾಡಿ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ ಹಾಗೂ ಬೈಲೂರು ಮಹಿಷಮರ್ದಿನಿ ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಅಲ್ಲದೆ, ಮಾರ್ಪಳ್ಳಿ, ಕೊರಂಗ್ರಪಾಡಿ, ಬೈಲೂರು ಪ್ರದೇಶದಲ್ಲಿ ಸಾಮಾಜಿಕ ಕಾರ್ಯಗಳ ಹೆಸರುವಾಸಿಯಾಗಿದ್ದರು.

ಅವರು ಒರ್ವ ಪುತ್ರ, ಪತ್ನಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.