Home Crime ಮಲ್ಪೆ : ಯುವಕನೋರ್ವ ಬೋಟಿನಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವು…!!

ಮಲ್ಪೆ : ಯುವಕನೋರ್ವ ಬೋಟಿನಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವು…!!

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಬಂದರಿನ ಬೋಟಿನಲ್ಲಿ ಇಟ್ಟಿದ್ದ ಬಲೆಯ ಮೇಲೆ ಯುವಕನೋರ್ವ ಕುಳಿತುಕೊಂಡು ಉಟ ಮಾಡುತ್ತಿದ್ದು ಆ ಸಮಯ ಆಕಸ್ಮಿಕವಾಗಿ ಧಕ್ಕೆಯ ನೀರಿಗೆ ಬಿದ್ದು ಮೃತಪಟ್ಟ ‌ಘಟನೆ ನಡೆದಿದೆ.

ಸಾವನ್ನಪ್ಪಿದ ಯುವಕ ಓಡಿಸ್ಸಾ ನಿವಾಸಿ ಆದಿಯಾ ಮುಂಡಾ ಎಂದು ತಿಳಿದು ಬಂದಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆಯ ಸಾರಾಂಶ : ಪಿರ್ಯಾದಿದಾರರಾದ ರಂಜನ್‌ ಮುಂಡಾ (33), ಓಡಿಸ್ಸಾ ರಾಜ್ಯ ಇವರು 2 ವರ್ಷದಿಂದ ಮಲ್ಪೆ ಬಂದರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಅವರ ಜೊತೆ ಅವರ ಚಿಕ್ಕಪ್ಪನ ಮಗಾ ಆದಿಯಾ ಮುಂಡಾ (24) ರವರು IND-KA-02-MM-473 ನಂಬರ್‌ ನ ಶ್ರೀ ವಿರಾಂಜನೇಯ ಹೆಸರಿನ ಮೀನುಗಾರಿಕೆ ಬೋಟಿನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 20/10/2025 ರಂದು 03:00 ಗಂಟೆಗೆ ಪಿರ್ಯಾದಿದಾರರಿಗೆ ಅವರ ತಮ್ಮನೊಂದಿಗೆ ಕೆಲಸ ಮಾಡಿಕೊಂಡಿದ್ದ ಬೋಟಿನ ಮಾಲಿಕರಾದ ಅಕ್ಷಯ್‌ ರವರು ಪೋನ್‌ ಕರೆ ಮಾಡಿ ಹಬ್ಬ ಇರುವ ಕಾರಣ ನಾವು ಬೋಟನ್ನು ಪಡ್ಡೆ ಧಕ್ಕೆಯ ಮೂರನೇ ಟೀ ದಕ್ಕೆಯಲ್ಲಿ ಬೋಟು ನಿಲ್ಲಿಸಿದ್ದು, ನಿಮ್ಮ ತಮ್ಮ ಆದಿಯಾ ಮುಂಡಾ ರವರು ನಮ್ಮ ಬೋಟಿನಲ್ಲಿದ್ದು, ಅವನು ಈ ದಿನ ಸುಮಾರು 02:50 ಗಂಟೆಗೆ ಬೋಟಿನಲ್ಲಿ ಇಟ್ಟಿದ್ದ ಬಲೆಯ ಮೇಲೆ ಕುಳಿತುಕೊಂಡು ಉಟ ಮಾಡುತ್ತಿದ್ದು ಆ ಸಮಯ ಆಕಸ್ಮಿಕವಾಗಿ ಧಕ್ಕೆಯ ನೀರಿಗೆ ಬಿದ್ದಿರುವುದಾಗಿ ಹೇಳಿದಾಗ ಪಿರ್ಯಾದಿದಾರರು ಕೂಡಲೇ ಮೂರನೇ ಪಡ್ಡೆ ಧಕ್ಕೆಗೆ ಬಂದು ಆದಿಯಾ ಮುಂಡಾ ರನ್ನು ನೋಡಿದಾಗ ಆತನು ಏನು ಮಾತನಾಡುವ ಸ್ಥಿತಿಯಲ್ಲಿ ಇರದೇ ಇದ್ದ ಕಾರಣ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸುಮಾರು 04:35 ಗಂಟೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈಧ್ಯರು ಈಗಾಗಲೇ ಆದಿಯಾ ಮುಂಡಾ ರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆದಿಯಾ ಮುಂಡಾ ರವರು ಬೋಟಿನಲ್ಲಿ ಇಟ್ಟಿದ್ದ ಬಲೆಯ ಮೇಲೆ ಕುಳಿತುಕೊಂಡು ಉಟ ಮಾಡುತ್ತಿದ್ದು, ಆ ಸಮಯ ಆಕಸ್ಮಿಕವಾಗಿ ಅಥವಾ ಇನ್ನಾವೂದೋ ಕಾರಣದಿಂದ ಧಕ್ಕೆಯ ನೀರಿಗೆ ಬಿದ್ದು ಧಕ್ಕೆಯ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 78/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.