ಉಡುಪಿ : ನಗು, ಮನರಂಜನೆ ಮತ್ತು ಅದ್ಭುತ ಅಭಿನಯದ ತುಳು ಹಾಸ್ಯಮಯ ನಾಟಕ “ಸುಣ್ಣದ ಬೊಟ್ಟು” ಇದೇ ಅಕ್ಟೋಬರ್ 31, ಶನಿವಾರ ಉಡುಪಿಯಲ್ಲಿ ಪ್ರದರ್ಶನಗೊಳ್ಳಲಿದೆ.
ತುಳು ರಂಗಭೂಮಿಯ ಜನಪ್ರಿಯ ಕಲಾವಿದ ದೇವದಾಸ್ ಕಾಪಿಕಾಡ್ ಮತ್ತು ತಂಡದಿಂದ ಮರೆಯಲಾಗದ ಸಂಜೆಯ ರಸದೌತಣ ನಡೆಯಲಿದೆ.
ವಿಶೇಷ ಆಕರ್ಷಣೆಯಾಗಿ ಖ್ಯಾತ ನಟ “ಆಕ್ಷನ್ ಕಿಂಗ್” ಅರ್ಜುನ್ ದೇವ್ ಅವರಿಂದ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.
ದಿನಾಂಕ 31 ಅಕ್ಟೋಬರ್ ಶನಿವಾರದಂದು ಭುಜಂಗ ಪಾರ್ಕ್, ಅಜ್ಜರಕಾಡು, ಉಡುಪಿ ಸಮಯ ಸಂಜೆ 6:00 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
ತುಳುನಾಡಿನ ಕಲೆ, ಸಂಸ್ಕೃತಿ ಮತ್ತು ರಂಗಭೂಮಿಯನ್ನು ಬೆಂಬಲಿಸಲು ಕುಟುಂಬ, ಸ್ನೇಹಿತರೊಂದಿಗೆ ಬನ್ನಿ ಎಂದು ಆಯೋಜಕರಾದ ತುಳುನಾಡ ಜವನೆರ್ ಮನವಿ ಮಾಡಿದ್ದಾರೆ.
ಟಿಕೆಟ್ ಮತ್ತು ಮಾಹಿತಿಗಾಗಿ ಸಂಪರ್ಕಿಸಿ: 8105163621


