Home Karavali Karnataka ಉಡುಪಿ : ಪೊದೆಯೊಳಗೆ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧೆಯ ರಕ್ಷಣೆ…!!

ಉಡುಪಿ : ಪೊದೆಯೊಳಗೆ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧೆಯ ರಕ್ಷಣೆ…!!

ಉಡುಪಿ : ಗಿಡಗಂಟಿಗಳು ಆವರಿಸುವ ಪೊದೆಯೊಳಗೆ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧೆಯನ್ನು ಇಂದ್ರಾಳಿಯ ರೈಲು ನಿಲ್ದಾಣದ ಬಳಿ ರಕ್ಷಿಸಿರುವ ಘಟನೆ ಸೋಮವಾರ ನಡೆದಿದೆ.

ವೃದ್ಧೆಯ ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ರೈಲು‌ ಹಳಿ ತಪಾಸಣೆಗೆಂದು, ನಡೆದು ಸಾಗುತ್ತಿದ್ದ ಗಸ್ತು ಸಿಬ್ಬಂದಿಗಳಿಗೆ ಪೊದೆಯೊಳಗೆ ವೃದ್ಧೆ ಇರುವುದು ಕಂಡುಬಂದಿದೆ.

ತಕ್ಷಣ ಗಸ್ತು ಸಿಬ್ಬಂದಿಗಳು ರೈಲ್ವೆ ಆರ್ ಪಿ ಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ರಕ್ಷಿಸಲ್ಪಟ್ಟ ವೃದ್ಧೆಯನ್ನು ಅಂಬುಲೆನ್ಸ್ ವಾಹನದಲ್ಲಿ ಸಾಗಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ.

ವಿಚಾರಿಸಲ್ಪಟ್ಟಾಗ ವೃದ್ಧೆಯು ಹೆಸರು ವಸಂತಿಬಾಯಿ, ಮೂಡುಸಗ್ರಿ ಗದ್ದುಗೆ ಬಳಿ ಮನೆ ಇರುವುದು, ಮಗ ಕರೆತಂದು ಬಿಟ್ಟುಹೋಗಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಸಂಬಂಧಿಕರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.