ಬ್ರಹ್ಮಾವರ: ಭಾವಿ ಪರ್ಯಾಯ ಶ್ರೀ ಶೀರೂರು ಮಠದ ವತಿಯಿಂದ ಪರ್ಯಾಯ ಪೂರ್ವಭಾವಿ ತಯಾರಿಗಳ ಬಗ್ಗೆ ಬ್ರಹ್ಮಾವರ ವಲಯದ ಸಭೆ ಶನಿವಾರ ಬ್ರಹ್ಮಾವರ ಉನ್ನತಿ ಸಭಾಂಗಣದಲ್ಲಿ ನಡೆಯಿತು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಉಡುಪಿ ಮಠದ ಸ್ವಾಮೀಜಿಗಳು ಬರೇ ಕೃಷ್ಣನ ಪೂಜೆಯಲ್ಲದೆ ಹಿಂದೂ ಸಮಾಜ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಶಿರೂರು ಮಠ ಹಿಂದಿನಿಂದಲು ಹಿಂದೂ ಸಮಾಜ ಕಟ್ಟಲು ಶ್ರಮಿಸಿದ್ದಾರೆ ಆದ್ದರಿಂದ ಶಿರೂರು ಮಠದ ಪರ್ಯಾಯ ಉಡುಪಿಯ ಜನತೆಯ ಪರ್ಯಾಯ ಆಗಬೇಕು ಮತ್ತು ನಾಡ ಹಬ್ಬದ ರೀತಿಯಲ್ಲಿ ಆಚರಿಸಬೇಕು ಹಾಗಾಗಿ ತಮ್ಮ ನಿಸ್ವಾರ್ಥ ಸಂಪೂರ್ಣ ಸಹಕಾರ ಅಗತ್ಯ ಎಂದರು.
ಶೀರೂರು ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ ಮಾತನಾಡಿ ಶಿರೂರು ಮಠದ ಪರ್ಯಾಯ ಸಂಧರ್ಭದಲ್ಲಿ ಕೃಷ್ಣ ನ ಸೇವೆಗೆ ಎಲ್ಲರ ಪ್ರೀತಿಯ ಸಹಕಾರ ಅಗತ್ಯ, ನಮ್ಮ ಪರ್ಯಾಯವನ್ನು ಚಂದ ಮಾಡಲು ಹಿಂದೂ ಸಮಾಜ ಒಟ್ಟಾಗಿ ನಿಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳ ಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಮಟ್ಟಾರು ರತ್ನಾಕರ ಹೆಗ್ಡೆ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಸಮಿತಿಯ ಕೋಶಾಧಿಕಾರಿ ಜಯಪ್ರಕಾಶ ಕೆದ್ಲಾಯ, ಉಮೇಶ್ ನಾಯ್ಕ್, ರಾಜೀವ್ ಕುಲಾಲ್, ಸಂದೀಪ್ ಮಂಜ, ಮೋಹನ್ ಭಟ್, ಶ್ರೀಕಾಂತ್ ನಾಯಕ್ ಉಪಸ್ಥಿತರಿದ್ದರು.
ಕಮಲಾಕ್ಷ ಹೆಬ್ಬಾರ್ ನಿರೂಪಿಸಿ, ಹರೀಶ್ ಶೆಟ್ಟಿ ಚೇರ್ಕಾಡಿ ಸ್ವಾಗತಿಸಿ ದರು. ನಳಿನಿ ಪ್ರದೀಪ್ ವಂದಿಸಿದರು.