ಮಂಗಳೂರು : ನಗರದ ಸುರತ್ಕಲ್ ಸಮೀಪ ಗುಡುಗು ಸಹಿತ ಭಾರೀ ಮಳೆಯ ಸಂದರ್ಭ ಎರಡು ಮನೆಗಳಿಗೆ ಸಿಡಿಲು ಬಡಿದು ಆರು ಮಂದಿ ಗಾಯಗೊಂಡಿರುವ ಘಟನೆ ಕಾಟಿಪಳ್ಳ 9ನೇ ಬ್ಲಾಕ್ ಮಧ್ಯದ ಗುರುನಗರ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಗಾಯಗೊಂಡವರನ್ನು ಭಾರತಿ(30), ವಿನಯ(35), ಕುಸುಮ(55), ಹರಿಯಪ್ಪ(67), ರವಿಕಲಾ (60), ನಿತೀಶ್ (35) ಎಂದು ಗುರುತಿಸಲಾಗಿದ್ದು, ಇವರನ್ನು ಕಾನದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.
ಭಾನುವಾರ ರಾತ್ರಿ ಏಕಾಏಕಿ ಸಿಡಿಲು ಗುಡುಗು ಸಹಿತ ಭಾರೀ ಮಳೆಯಾಗಿದೆ. ಈ ವೇಳೆ ಹರಿಯಪ್ಪ ಮತ್ತು ರವಿಕಲಾ ಎಂಬವರ ಮನೆಯ ವಿದ್ಯುತ್ ಸ್ವಿಚ್ ಬೋರ್ಡ್‌ಗೆ ಸಿಡಿಲು ಬಡಿಯಿತೆನ್ನಲಾಗಿದೆ.
ಘಟನೆಯಿಂದ ಮನೆಯಲ್ಲಿದ್ದ ಎಲ್ಲಾ ಸ್ವಿಚ್‌ಬೋರ್ಡ್ ಗಳು ಸುಟ್ಟು ಕರಕಲಾಗಿದ್ದು, ಮನೆಯ ನೆಲ, ಗೋಡೆ ಮತ್ತು ಮೇಲ್ಛಾವಣಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಘಟನಾಸ್ಥಳಕ್ಕೆ ಸುರತ್ಕಲ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಮಧ್ಯ ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಿಗರಿಗೆ ಮಾಹಿತಿ ನೀಡಿದ್ದು, ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.