ಮಂಗಳೂರು : ಕಳೆದ 14 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮುಕ್ಕಚೇರಿ ಉಳ್ಳಾಲದ ಮಹಮ್ಮದ್ ಸಂಶೀರ್ ಎಂದು ತಿಳಿಯಲಾಗಿದೆ.
ಉಳ್ಳಾಲ ಠಾಣಾ ಮೊ.ನಂ 312/2011 ಕಲಂ 8(c) (ii) r/w 20(b) NDPS ACT ಹಾಗೂ ಮಾನ್ಯ JMFC II ನೇ ನ್ಯಾಯಾಲಯದ CC ನಂ 1757/13 ಪ್ರಕರಣದಲ್ಲಿ ಆರೋಪಿ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ.
ಆರೋಪಿಯನ್ನು ಪೊಲೀಸರು ಅಪಾರ್ಟ್ಮೆಂಟ್ ರೂಮ್ ನಂ 07 ತೋಯಿಬ್ ಮಸೀದಿ ಎದುರುಗಡೆ, ಮುಕ್ಕಚೇರಿ ಉಳ್ಳಾಲದ ಬಳಿ ನ ಪತ್ತೆ ಹಚ್ಚಲಾಯಿತು.
ಇದೀಗ ನ್ಯಾಯಾಲಯವು ಆರೋಪಿತನಿಗೆ LPC ವಾರಂಟ್ ಹೊರಡಿಸಿ, 14 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.



