Home Crime ಮಣಿಪಾಲ : ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ಮಾಲಕಿಯ ವಿರುದ್ಧ ಪ್ರಕರಣ ದಾಖಲು…!!

ಮಣಿಪಾಲ : ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ಮಾಲಕಿಯ ವಿರುದ್ಧ ಪ್ರಕರಣ ದಾಖಲು…!!

ಮಣಿಪಾಲ: ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ಮಾಲಕಿಯ ವಿರುದ್ಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪರ್ಕಳ ಜಂಕ್ಷನ್ ಬಳಿ ಮಣಿಪಾಲ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹೆರ್ಗಾ ಕಡೆಯಿಂದ ಪೆರ್ಕಳ ಕಡೆಗೆ ಶ್ರೇಯಸ್ (16) ಎಂಬಾತ ಸ್ಕೂಟ‌ರ್ ಚಲಾಯಿಸಿಕೊಂಡು ಬಂದಿದ್ದಾನೆ.

ಆತನು ಅಪ್ರಾಪ್ತ ವಯಸ್ಕನಾಗಿದ್ದ ಕಾರಣ ಚಾಲನಾ ಪರವಾನಿಗೆಯೂ ಇರಲಿಲ್ಲ. ಪರಿಣಾಮ ಆತನಿಗೆ ಸ್ಕೂಟರ್ ಸವಾರಿ ಮಾಡಲು ನೀಡಿದ ಸ್ಕೂಟರಿನ ಮಾಲಕಿ ಉಷಾ(45) ಅವರ ಮೇಲೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.