Home Karavali Karnataka ಸೌಜನ್ಯಳ ತಾಯಿಗೆ ನಿಂದಿಸಿದ ಆರ್ಚಕ : ಆಕ್ರೋಶಗೊಂಡ ಹೋರಾಟಗಾರರು…!!

ಸೌಜನ್ಯಳ ತಾಯಿಗೆ ನಿಂದಿಸಿದ ಆರ್ಚಕ : ಆಕ್ರೋಶಗೊಂಡ ಹೋರಾಟಗಾರರು…!!

ಕುಂದಾಪುರ: ಧರ್ಮಸ್ಥಳದಲ್ಲಿ ಕಾಮಾಂಧ, ಕೊಲೆಗಡುಕರ ಪೈಶಾಚಿಕತೆಗೆ ಸೌಜನ್ಯ ಬಲಿಯಾಗಿ ಬರೋಬ್ಬರಿ 13 ವರ್ಷಗಳು ಕಳೆದರೂ ಸೌಜನ್ಯಳಿಗೆ ನ್ಯಾಯಕ್ಕಾಗಿ ನಡೆಯುವ ಹೋರಾಟ ಇಂದಿಗೂ ಚಾಲ್ತಿಯಲ್ಲಿದ್ದು, ಗುರುವಾರ ಮಹಿಳೆಯರು, ಪುರುಷರು ಸೇರಿದಂತೆ ಸರಿಸುಮಾರು 300ರಷ್ಟು ಮಂದಿ ಭಾಗಿಯಾದ ಹೋರಾಟ ಸಮಿತಿಯಿಂದ ಸೌಜನ್ಯ ಹಂತಕರಿಗೆ ಶಿಕ್ಷೆ ನೀಡುವಂತೆ ಕುಂದಾಪುರ ತಾಲೂಕಿನ ಆನೆಗುಡ್ಡೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.

ಪೂಜೆ ಮುಗಿಸಿ ಎಲ್ಲರೂ ಹೊರಕ್ಕೆ ಬರುತಿದ್ದ ವೇಳೆ ದೇವಸ್ಥಾನಕ್ಕೆ ಗಣಹೋಮ ಪೂಜೆಗೆಂದು ಬಂದಿದ್ದ ಕುಂದಾಪುರದ ದಯಾನಂದ ಎನ್ನಲಾದ ಅರ್ಚಕ ಭಟ್ಟರೋರ್ವರು ಸೌಜನ್ಯಳ ತಾಯಿ ಹಾಗೂ ಹೋರಾಟ ಸಮಿತಿಯವರನ್ನು ಏಕಾಏಕಿ ತಡವಿಕೊಂಡು ಅವಾಚ್ಯಶಬ್ದಗಳನ್ನು ಬಳಸಿ ಸಾರ್ವಜನಿಕವಾಗಿ ನಿಂದಿಸಿದ ಘಟನೆ ಸಂಭವಿಸಿದೆ.

ಭಟ್ಟರ ವರ್ತನೆಯಿಂದ ಆಕ್ರೋಶಗೊಂಡ ಸೌಜನ್ಯ ಪರ ಹೋರಾಟಗಾರರು ದಯಾನಂದ ಭಟ್ಟರನ್ನು ತರಾಟೆಗೆ ತಗೆದುಕೊಂಡರೂ ಭಟ್ಟರ ತಲೆಗೇರಿದ ಸೌಜನ್ಯ ನಿಂದನೆ ನಿಲ್ಲದ ಕಾರಣ ಸಹನೆ ಕಳೆದುಕೊಂಡ ಹೋರಾಟಗಾರರು ಭಟ್ಟರ ಮೈಮೇಲೆ ಏರಿ ಹೋಗಿದ್ದರು.

ಪರಿಸ್ಥಿತಿ ಕೈ ಮಿರುತ್ತಿದ್ದಂತೆ ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಹಾಗೂ ಸುಧೀರ್ ಮಲ್ಯಾಡಿ ಮಧ್ಯ ಪ್ರವೇಶಿಸಿ ಹೋರಾಟಗಾರರನ್ನು ಸಮಾಧಾನ ಪಡಿಸಿದರು.
ಅಷ್ಟರ ತನಕ ಭಟ್ಟರ ತಲೆಗೇರಿದ ಸೌಜನ್ಯ ವಿರೋಧಿ ಅಮಲು ಸಹಾ ಇಳಿದು ದಯಾನಂದ ಭಟ್ರು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ ಪ್ರಸಂಗ ನಡೆದಿದೆ.