Home Crime ಹಂದಿಯ ಚಿಪ್ಪು ಪತ್ತೆ: ಆರೋಪಿಯಬಂಧನ

ಹಂದಿಯ ಚಿಪ್ಪು ಪತ್ತೆ: ಆರೋಪಿಯಬಂಧನ

ಮಂಗಳೂರು, ಜೂ. 4: ಕೆಪಿಟಿ ಜಂಕ್ಷನ್ ಬಳಿ ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

 

ಭಟ್ಕಳದ ಈಶ್ವರನಾಗು ಆತನ ಮರಾಠಿ ಬಂಧಿತ ಆರೋಪಿ. ಆತನಿಂದ 3 ಕಿ. ಗ್ರಾಂ. ತೂಕದ ಚಿಪ್ಪು ಹಂದಿಯ ಚಿಪ್ಪು ವಶಪಡಿಸಿಕೊಳ್ಳಲಾಗಿದೆ.

 

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

 

ಮಂಗಳೂರು ಸಿ.ಐ.ಡಿ ಪೊಲೀಸ್‌ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ದಿಲೀಪ್‌ ಹಾಗೂ ಸಿಬಂದಿ ತಾರಾನಾಥ ಎಸ್. ಮತ್ತು ಅಬ್ದುಲ್ ರವೂಫ್ ಭಾಗವಹಿಸಿದ್ದರು.