Home Karavali Karnataka ಅಕ್ರಮ ಪಾಕಿಸ್ತಾನ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲು ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿದ ಕಾರ್ಕಳ ಶಾಸಕ ಸುನಿಲ್...

ಅಕ್ರಮ ಪಾಕಿಸ್ತಾನ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲು ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್…!!

ಕಾರ್ಕಳ : ಅಕ್ರಮ ಪಾಕಿಸ್ತಾನ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲು ತನ್ನ ಕಚೇರಿಯಲ್ಲೇ ಶಾಸಕ ವಿ. ಸುನಿಲ್ ಕುಮಾರ್ ಸಹಾಯವಾಣಿ ಆರಂಭಿಸಿದ್ದಾರೆ.

ಗಡಿಯಾಚೆಗಿನ ವೈರಿಯ ನಿಯಂತ್ರಣಕ್ಕೆ ಸೇನೆ ಇದೆ. ಗಡಿಯೊಳಗಿನ ವೈರಿ ಸದೆಬಡಿಯಲು ನಾವೆಲ್ಲ ಸೇನಾನಿಯಾಗೋಣ. ಎಲ್ಲವನ್ನೂ ಸರಕಾರ ಮಾಡಲಿ ಎನ್ನುವ ಬದಲು ದುರಿತ ಕಾಲದಲ್ಲಿ ಜವಾಬ್ದಾರಿ ಮೆರೆಯೋಣ. ಕರಾವಳಿ ಜಿಲ್ಲೆಯ ವ್ಯಾಪ್ತಿಯಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸುವವರ ಮೇಲೆ ಕಣ್ಣಿಡೋಣ ಎಂದು ಸುನಿಲ್ ಹೇಳಿದ್ದಾರೆ.

ಪಾಕಿಸ್ತಾನಿ ವಲಸಿಗರು, ಬಾಂಗ್ಲಾ ವಲಸಿಗರು, ಉಗ್ರರ ಸ್ಲೀಪರ್ ಸೆಲ್ ಆಗಿ ಕೆಲಸ ಮಾಡುವವರು, ದೇಶದ್ರೋಹಿ ಚಟಿವಟಿಕೆಗೆ ಪ್ರತ್ಯಕ್ಷ ಪರೋಕ್ಷ ಸಹಾಯ ಮಾಡುವವರು, ಪಾಕ್ ಸಿಂಪಥೈಸರ್ ಗಳ ಮೇಲೆ ನಿಗಾ ವಹಿಸೋಣ ಎಂದ ಅವರು ಇಂತಹವರ ಬಗ್ಗೆ ಮಾಹಿತಿ ಲಭಿಸಿದಾಗ ತಕ್ಷಣ ನಮ್ಮ 6366454238, 7348906249 ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಿ. ಅಂತವರ ವಿರುದ್ಧ ಸಂಬಂಧಪಟ್ಟ ಇಲಾಖೆಗೆ / ಸರಕಾರಕ್ಕೆ ತಿಳಿಸಿ ಕ್ರಮ ಆಗುವಂತ ಕೆಲಸವನ್ನು ನಾವು ಮಾಡಲಿದ್ದೇವೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.