Home Crime ಕಾರೊಂದರ ಹಿಂದಿನ ಗಾಜು ಒಡೆದು ಹಾಕಿದ ಟ್ರಾಫಿಕ್ ಪೊಲೀಸರು…!!

ಕಾರೊಂದರ ಹಿಂದಿನ ಗಾಜು ಒಡೆದು ಹಾಕಿದ ಟ್ರಾಫಿಕ್ ಪೊಲೀಸರು…!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನಂತೂರು ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರೇ ಕಾರೊಂದರ ಹಿಂದಿನ ಗಾಜು ಒಡೆದು ಹಾಕಿದ ಘಟನೆ ಸಂಭವಿಸಿದೆ, ಈ ವಿಡಿಯೋ ರಲ್ಲಿ ಕಡೆ ವೈರಲ್ ಆಗಿದೆ.

ಡ್ರಂಕ್ ಅಂಡ್ ಡ್ರೈವ್ ಅನುಮಾನದಲ್ಲಿ ಟ್ರಾಫಿಕ್ ಪೊಲೀಸ್‌ ಕಾರು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಚಾಲಕ ಕಾರು ನಿಲ್ಲಿಸದೇ ಮುಂದುವರಿದಿದ್ದಾನೆ. ಇದರಿಂದ ಕೋಪಗೊಂಡ ಪೊಲೀಸ್ ಕಾರಿನ ಹಿಂಬದಿ ಗ್ಲಾಸ್ ಒಡೆದು ಹಾಕಿದ್ದಾರೆ. ನಂತರ ಸ್ಥಳದಲ್ಲಿ ಇದ್ದವರು ಪೊಲೀಸರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಬಳಿಕ ಚಾಲಕನ ವಿರುದ್ಧ ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರು ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.