Home Crime ಮನೆಯ ಆವರಣಗೋಡೆ ಕುಸಿದು ಕಂಟ್ರಾಕ್ಟರ್ ಸಾವು…!!

ಮನೆಯ ಆವರಣಗೋಡೆ ಕುಸಿದು ಕಂಟ್ರಾಕ್ಟರ್ ಸಾವು…!!

ಮಂಗಳೂರು : ಮನೆಯ ಆವರಣ ತಡೆಗೋಡೆ ಕುಸಿದು ಮಣ್ಣಿನಡಿ ಸಿಲುಕಿ ಕಂಟ್ರಾಕ್ಟರ್ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ‌ ಕುಂಟಿಕಾನ ಎಂಬಲ್ಲಿ ಸಂಭವಿಸಿದೆ.

ಅಶೋಕನಗರ ನಿವಾಸಿ ಆಂಟನಿ ಮಸ್ಕರೇನಸ್ (65) ಮೃತಪಟ್ಟ ದುರ್ದೈವಿ ಎಂದು ತಿಳಿಯಲಾಗಿದೆ.

ಮನೆಯೊಂದರ ಆವರಣ ತಡೆಗೋಡೆ ನಿರ್ಮಾಣಕ್ಕೆ ಅಳತೆ ಮಾಡಲಾಗುತ್ತಿತ್ತು. ಈ ಸಂದರ್ಭ ಏಕಾಏಕಿ ಮಣ್ಣು ಕುಸಿದು ಕಾಮಗಾರಿಗೆ ಗುತ್ತಿಗೆ ವಹಿಸಿಕೊಂಡಿದ್ದ ಆಂಟನಿ ಮಸ್ಕರೇನಸ್ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮಣ್ಣಿನಡಿಯಿಂದ ಆಂಟನಿ ಮಸ್ಕರೇನಸ್‌ರನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಆಂಟನಿ ಮಸ್ಕರೇನಸ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಘಟನಾ ಸ್ಥಳಕ್ಕೆ ಕಾವೂರು ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.