ಮೂಡುಬೆಳ್ಳೆ : ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ಮೂಡುಬೆಳ್ಳೆಯಲ್ಲಿ ಕಾಲೇಜು ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ 2026 – 27 ಕಾರ್ಯಕ್ರಮ ಜೂನ್ 1 ರಂದು ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಮೂಡುಬೆಳ್ಳೆ ಇದರ ಅಧ್ಯಕ್ಷರಾದ ಯಾದವ ದೇವಾಡಿಗ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಕಾಲೇಜಿನಲ್ಲಿರುವ ವಿದ್ಯಾರ್ಥಿಗಳು ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ ಉತ್ತಮ ಅಂಕ ಪಡೆದುಕೊಂಡು ಉತ್ತೀರ್ಣರಾಗಬೇಕೆಂದು ಎಂದರು.
ಕಾರ್ಯಕ್ರಮದ ಅತಿಥಿಗಳಾದ ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಮೂಡುಬೆಳ್ಳೆ ಇದರ ಪ್ರಭಾರ ಕಾರ್ಯದರ್ಶಿ ಪ್ರಭಾಕರ್ ಕೆ ಎಸ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ದಿನನಿತ್ಯವೂ ಮಕ್ಕಳು ಪಾಲಿಸಬೇಕಾದ ನಿಯಮಗಳನ್ನು ಅಚ್ಚುಕಟ್ಟಾಗಿ ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳು ಹಾಗೂ ಉದ್ಘಾಟಕರು ಆಗಿರುವಂತಹ ಖ್ಯಾತ ವಾಗ್ಮಿಯವರೂ, ಮಾನಸಿಕ ಆರೋಗ್ಯ ವೃತ್ತಿಪರರು ಮನಶಾಂತಿ, ಮಂಗಳೂರು
ಇವರು ಮಕ್ಕಳನ್ನೂ ಪೋಷಕರನ್ನೂ ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಅತ್ಯುತ್ತಮ ರೀತಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.
ಮಕ್ಕಳು ಹಾಗೂ ಪೋಷಕರ ನಡುವಿನ ಭಾವನಾತ್ಮಕ ಸಂಬಂಧ ಹೇಗಿದೆ? ಅದನ್ನು ಹೇಗೆ ಸರಿ ಮಾಡಿ ಮಾಡಬಹುದು? ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಆಗುವ ಬದಲಾವಣೆಗಳು ಏನು?
ಈ ಬದಲಾವಣೆಯನ್ನು ನಿಯಂತ್ರಿಸುವ ಕ್ರಮ ಏನು? ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಶಿಸ್ತು, ಪ್ರೀತಿ, ತಾಳ್ಮೆ, ಸ್ವಾತಂತ್ರ್ಯ ತುಂಬಾ ಮುಖ್ಯ. ಇವೆಲ್ಲವೂ ಇದ್ದರೆ ಪೋಷಕರ ಮತ್ತು ಮಕ್ಕಳ ನಡುವಿನ ಸಂಬಂಧ ಇನ್ನೂ ಉತ್ತಮವಾಗಿರುತ್ತದೆ ಎಂದು ಸುಂದರವಾಗಿ, ಸನ್ನಿವೇಶದ ಮೂಲಕ ಪೋಷಕರಿಗೂ ಮಕ್ಕಳಿಗೂ ಹಾಗೂ ಶಿಕ್ಷಕರಿಗೂ ತಿಳಿ ಹೇಳಿದರು.
ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರಾದ ಶ್ರೀ ಭಾಸ್ಕರ ಆಚಾರ್ಯ ಇವರು ಆಗಮಿಸಿದ ಸರ್ವರನ್ನು ಸ್ವಾಗತಿಸಿದರು.
ಜ್ಞಾನಗಂಗಾ ಕಾಲೇಜಿನ ಅಂಗಳಕ್ಕೆ ಹೊಸದಾಗಿ ಕಾಲಿಟ್ಟ ನಮ್ಮ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಕಾಲೇಜಿನ ಕುರಿತಾದ ಮಾಹಿತಿಯನ್ನು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀನಾ ಎಸ್ ನಾಯಕ್ ಕಾಲೇಜಿನ ಶಿಸ್ತು, ನಿಯಮದ ಕುರಿತು ತಿಳಿಹೇಳಿದರು.
ಡಾ.ರಮೀಳಾ ಶೇಖರ್ ಹಾಗೂ ಅತಿಥಿ ಗಣ್ಯರೆಲ್ಲರೂ ಸೇರಿ ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಠಿಣ ಪರಿಶ್ರಮದಿಂದ 594 ಅಂಕದೊಂದಿಗೆ 99% ಪಡೆದು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನದಲ್ಲಿ ಉತ್ತೀರ್ಣಳಾದ ಕುಮಾರಿ ಅದಿತಿ ಹಾಗೂ 590 ಅಂಕ ಪಡೆದು 98.33% ಪಡೆದು ರಾಜ್ಯಕ್ಕೆ 10ನೇ ಸ್ಥಾನದಲ್ಲಿ ಉತ್ತೀರ್ಣಳಾದ ರಶ್ಮಿತಾ ಆರ್ ನಾಯಕ್ ಇವರನ್ನು ಅತಿಥಿ ಗಣ್ಯರ ನಡುವೆ ಸನ್ಮಾನಿಸಲಾಯಿತು.
ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಾಣಿಜ್ಯ ವಿಭಾಗದ 25 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದ 26 ವಿದ್ಯಾರ್ಥಿಗಳು ಒಟ್ಟು 51 ವಿದ್ಯಾರ್ಥಿಗಳಿಗೆ ಗೌರವ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಜ್ಞಾನಗಂಗಾ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳಲ್ಲಿ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90 ಶೇಕಡಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಿ, ಪರಿಚಯಿಸಲಾಯಿತು.
ಸಾಧನೆಗೆ ಪ್ರೇರಕ ಶಕ್ತಿಗಳು ಈ ಶಿಕ್ಷಕರು ಅಂತಹ ಶಿಕ್ಷಕ ವರ್ಗದವರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಈ ಸಮಯದಲ್ಲಿ ನಡೆಯಿತು.
ಶ್ರೀಮತಿ ವನ್ಯಶ್ರೀ ಸಂಖ್ಯಾಶಾಸ್ತ್ರ ಉಪನ್ಯಾಸಕಿ ಹಾಗೂ ಶ್ರೀಮತಿ ರಮ್ಯಾ ರಸಾಯನಶಾಸ್ತ್ರ ಉಪನ್ಯಾಸಕಿ ಇವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು.
ಶ್ರೀಮತಿ ಕಾವ್ಯಶ್ರೀ ಗಣಿತಶಾಸ್ತ್ರ ಉಪನ್ಯಾಸಕಿ ಇವರು 90 ಶೇಕಡಕ್ಕಿಂತ ಹೆಚ್ಚು ಅಂಕ ಬಂದಿರುವ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಹೆಸರುಗಳನ್ನು ವಾಚಿಸಿದರು.
ಶ್ರೀಮತಿ ಪ್ರಮೀಳಾ ಹಿಂದಿ ಭಾಷಾ ಉಪನ್ಯಾಸಕಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ರಮೀಳಾ ಶೇಖರ್ ಇವರ ವ್ಯಕ್ತಿ ಪರಿಚಯವನ್ನು ತಿಳಿಸಿದರು.
ಶ್ರೀಮತಿ ಪ್ರತಿಮಾ ಅರ್ಥಶಾಸ್ತ್ರ ಉಪನ್ಯಾಸಕಿ ಆಗಮಿಸಿದ ಸರ್ವರಿಗೂ ಧನ್ಯವಾದ ತಿಳಿಸಿದರು.
ಶ್ರೀಮತಿ ದಿವ್ಯ ಲೆಕ್ಕಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ಉಪನ್ಯಾಸಕಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕುಮಾರಿ ಶ್ರಾವ್ಯ ಹಾಗೂ ರಕ್ಷಾ ಇವರು ಕಾರ್ಯಕ್ರಮದ ಮೊದಲಿಗೆ ದೇವತಾ ಪ್ರಾರ್ಥನೆ ಸಲ್ಲಿಸಿದರು.





