Home Crime ಕರಿಯಕಲ್ಲು ಶ್ರೀ ಶನೀಶ್ವರ ಕ್ಷೇತ್ರ ದ ಶ್ರೀ ದೇವರ ಬೆಳ್ಳಿಯ ಕಣ್ಣುಗಳನ್ನು ಕಳವುಗೈದ ಆರೋಪಿಯ ಬಂಧನ…!!

ಕರಿಯಕಲ್ಲು ಶ್ರೀ ಶನೀಶ್ವರ ಕ್ಷೇತ್ರ ದ ಶ್ರೀ ದೇವರ ಬೆಳ್ಳಿಯ ಕಣ್ಣುಗಳನ್ನು ಕಳವುಗೈದ ಆರೋಪಿಯ ಬಂಧನ…!!

ಕಾರ್ಕಳ : ಕರಿಯಕಲ್ಲು ಶ್ರೀ ಶನೀಶ್ವರ ಕ್ಷೇತ್ರ ದ ಶ್ರೀ ದೇವರ ಬೆಳ್ಳಿಯ ಕಣ್ಣುಗಳು ಕಳುವಾಗಿದ್ದು, ಕಳುವು ಮಾಡಿದ ಬಿಹಾರ ಮೂಲದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಬಿಹಾರ ಮೂಲದ ಸರ್ಫ್ರಾಜ್ ಎಂದು ಗುರುತಿಸಲಾಗಿದೆ.

ಎಫ್ ಐ ಆರ್ ದಾಖಲದ ಆರು ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಕಾರ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಶ್ರೀ ದೇವರ ಬೆಳ್ಳಿಯ ಕಣ್ಣುಗಳನ್ನು ವಶಕ್ಕೆ ಪಡೆದಿದ್ದಾರೆ.

ಆರು ಗಂಟೆಯಲ್ಲಿ ಆರೋಪಿ ಪೋಲೀಸರ ಕೈ ಗೆ ಸಿಗುವ ಮೂಲಕ ಶನಿದೇವ ಮತ್ತೆ ತನ್ನ ಕಾರಣಿಕ ಮತ್ತು ಶಕ್ತಿಯನ್ನು ತೋರಿಸಿದ್ದಾರೆ.

ಕಾರ್ಕಳ ನಗರ ಪೊಲೀಸರ ಈ ತ್ವರಿತ ಕಾರ್ಯಚರಣೆ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.