Home Crime ಪಡುಬಿದ್ರಿ: ಬಾವಿಗೆ ಹಾರಿ ವೃದ್ಧ ಆತ್ಮಹತ್ಯೆ…!!

ಪಡುಬಿದ್ರಿ: ಬಾವಿಗೆ ಹಾರಿ ವೃದ್ಧ ಆತ್ಮಹತ್ಯೆ…!!

ಪಡುಬಿದ್ರಿ, ಅ.16: ಕಾಲಿನ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲೂರು ಗ್ರಾಮ, ಕಾಪು ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಎಲ್ಲೂರು ಗ್ರಾಮದ ಶಂಕರ ಶೆಟ್ಟಿ (70) ಎಂದು ಗುರುತಿಸಲಾಗಿದೆ.

ಶಂಕರ ಶೆಟ್ಟಿ ಅವರಿಗೆ 7-8 ತಿಂಗಳ ಹಿಂದೆ ಕಾಲಿನ ಊತದ ಕಾರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಮನೆಯಲ್ಲೇ ಇದ್ದರು. ಅ.15 ರಂದು ಬೆಳಿಗ್ಗೆ ಉಪಹಾರ ಮಾಡಿ ಮನೆಯಿಂದ ಹೊರಹೋದ ಅವರು, ಬೆಳಿಗ್ಗೆ 7:30 ರಿಂದ 8:30 ರ ಅವಧಿಯಲ್ಲಿ ಮನೆಯ ಬಾವಿಗೆ ಹಾರಿದ್ದಾರೆ ಎಂದು ನೆರೆಮನೆಯ ವನಿತಾ ಅವರು ಮಗ ದಿನೇಶ್ ಶೆಟ್ಟಿ (40) ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದು ನೋಡಿದಾಗ ಬಾವಿಯಲ್ಲಿ ಶಂಕರ ಶೆಟ್ಟಿ ಮೃತಪಟ್ಟಿರುವುದು ಕಂಡುಬಂದಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 18/2026 ಕಲಂ 194 BNSS ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.