ಬೈಂದೂರು: : ಪೊಲೀಸರಿಗೆ ಪ್ರತಿ ದಿನ ಖಾಕಿ ಬಟ್ಟೆಯೇ ಸಂಗಾತಿ.
ಅವರ ವೃತ್ತಿ ಜೀವನದಲ್ಲಿ ಬಹುತೇಕ ಬಣ್ಣ ಬಣ್ಣದ ಬಟ್ಟೆಗಳು ಅವರಿಗೆ ಕನಸಿನ ಮಾತೇ ಸರಿ. ಕಷ್ಟವೋ ಸುಖವೋ ಬಂದಿದ್ದೆಲ್ಲ ಬರಲಿ ಅನ್ನುತ್ತಾ ಬಿಸಿಲಿನ ಝಳಕ್ಕೆ ಮೈ ಒಡ್ಡುತ್ತಾ ತಲೆ ನೋವಿನ ಪ್ರಕರಣಗಳನ್ನು ಭೇದಿಸುತ್ತಾ ದಿನ ನಿತ್ಯದ ಜಂಜಾಟದಲ್ಲಿ ಒದ್ದಾಟದಲ್ಲಿ ದಿನ ಕಳೆಯುವುದು ಪೊಲೀಸರು
ಹೌದು ಅಂತಹ ಪೊಲೀಸರಿಗೆ ಸ್ವಲ್ಪ ರಿಲ್ಯಾಕ್ಸ್ ಸಿಕ್ಕಿದರೆ ಹೇಗಿರುತ್ತೆ? ಎನ್ನುವುದಕ್ಕೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಗಂಗೊಳ್ಳಿ ಪೊಲೀಸ್ ಠಾಣೆ ಸಾಕ್ಷಿಯಾಯಿತು.
ನಾಡಿನೆಲ್ಲೆಡೆ ನಾಡಿನ ಹಬ್ಬ ಹಬ್ಬದ ಸಂಭ್ರಮದಲ್ಲಿ ಇಂದು ಸಂಭ್ರಮದ ಆಯುಧ ಪೂಜೆ ನಡೆಯುತ್ತಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಯುಧ ಪೂಜೆ ನಡೆಸಲಾಯಿತು.
ದಿನಂಪ್ರತಿ ಖಾಕಿ ಬಟ್ಟೆಯಲ್ಲಿ ಕಾಣುತ್ತಿದ್ದ ಪೊಲೀಸರು ಇಂದು ಸಾಂಪ್ರದಾಯಿಕ ಶೈಲಿಯ ಬಿಳಿ ಕ್ರೀಮ್ ಕಲರಿನ ಬಟ್ಟೆ ತೊಟ್ಟು ಮಿಂಚಿದರು.
ಠಾಣೆಯಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದರು. ವಾಹನಗಳು, ರಿವಾಲ್ವಾರ್, ಬಂದೂಕುಗಳನ್ನು ಅಲಂಕಾರಗೊಳಿಸಿ ಪೂಜಾ ಕೈಂಕರ್ಯ ನೆರವೇರಿಸಿದರು. ಪೂಜೆಯ ಬಳಿಕ ಸಿಬ್ಬಂದಿ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಠಾಣೆಯ ಉಪನಿರೀಕ್ಷಕರಾದ ಪಿಎಸ್‌ಐ ಪವನ್ ನಾಯಕ್ ತಾನಿಕಾ ವಿಭಾಗದ ಅಧಿಕಾರಿ ಪಿಎಸ್ಐ ಸುನಿಲ್ ಮಾರ್ಗದರ್ಶನದಲ್ಲಿ. ಗಂಗೊಳ್ಳಿ ವೀರೇಶ್ವರ ದೇವಸ್ಥಾನದ ಅರ್ಚಕರಾದ ಲಕ್ಷ್ಮೀನಾರಾಯಣ ಭಟ್ ನೇತೃತ್ವದಲ್ಲಿ ಆಯುಧ ಪೂಜೆ ನೆರವೇರಿತು, ಹಾಗೂ ಸಿಬ್ಬಂದಿಗಳ ವಾಹನಗಳಿಗೆ ಹಾಗೂ ಸರಕಾರಿ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಊರಿನ ಹಿರಿಯರು ಪತ್ರಕರ್ತರು ಉದ್ಯಮಿಗಳು ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರು ಗಂಗೊಳ್ಳಿ ಠಾಣಾ ಸಿಬ್ಬಂದಿಗಳು ಹಾಜರಿದ್ದರು,

