Home Crime ಅಜೆಕಾರು : ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ : ಮಹಿಳೆ ವಿರುದ್ದ ಪ್ರಕರಣ ದಾಖಲು…!!

ಅಜೆಕಾರು : ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ : ಮಹಿಳೆ ವಿರುದ್ದ ಪ್ರಕರಣ ದಾಖಲು…!!

ಅಜೆಕಾರು : ಸಾಮಾಜಿಕ ಜಾಲತಾಣದಲ್ಲಿ ಕೋಮು ಭಾವನೆ ಕೆರಳಿಸುವ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದ ಮಹಿಳೆಯೊಬ್ಬರ ವಿರುದ್ದ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ. 30 ರಂದು ವಿಜಯ ವಿ.ಜಿ ಎಂಬವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ಖಾತೆಯಲ್ಲಿ “”ಉಪ್ಪು ತಿಂದ ಮೇಲೆ ನೀರು ಕುಡಿಯಲೆ ಬೇಕು ಅಲ್ವಾ 420 ವಿರೇಂದ್ರ ಜೈನ್ ಅತ್ಯಾಚಾರ ಕೊಲೆ ಮಾಡಿದ ನಿನಗೆ ಶಿಕ್ಷೆ ಆಗ್ಲೇ ಬೇಕಲ್ವಾ,”ಸೌಜನ್ಯಳೂ ಸೇರಿ ಧರ್ಮಸ್ಥಳದಲ್ಲಿ ಸತ್ತವರು ಹಿಂದೂಗಳು ಕಣ್ರಪ್ಪ… ಅವರನ್ನು ಬರ್ಬರವಾಗಿ ಕೊಂದ ಆರೋಪ ಹೊತ್ತವರು ಜೈನ ಅಲ್ಪಸಂಖ್ಯಾತರು” ಎಂದು ಅವಾಚ್ಯ ಶಬ್ದಗಳಲ್ಲಿ ಜೈನ ಧರ್ಮದ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಹಾಗೂ ಬೇರೆ ಧರ್ಮದವರೊಂದಿಗೆ ವೈಮನಸ್ಸು ಹಾಗೂ ಕೋಮು ಭಾವನೆ ಕೆರಳಿಸುವ ಬರಹವನ್ನು ಹರಿಯಬಿಟ್ಟಿದ್ದ ಹಿನ್ನಲೆಯಲ್ಲಿ ಅವರ ವಿರುದ್ದ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.