Home Crime ಬ್ಯಾಂಕಿನ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ…!!

ಬ್ಯಾಂಕಿನ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ…!!

ಉಡುಪಿ: ಜಿಲ್ಲೆಯ ಕಾರ್ಕಳದ ಸಾಣೂರು ನಿವಾಸಿ ಮಹಿಳೆಯೊಬ್ಬರಿಗೆ ಬ್ಯಾಂಕ್ ಒಂದರ ಹೆಸರು ಹೇಳಿ ಕೆವೈಸಿ‌ ಅಪ್ಡೇಟ್‌ ಮಾಡು ಇದೆ ಹೇಳಿ ಅವರ ಖಾತೆಯಲ್ಲಿ ಇದ್ದ ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ ಘಟನೆ ನಡೆದಿದೆ.

ವಂಚನೆಗೊಳಾಗದ ಮಹಿಳೆ ಪ್ರೇಮಲತಾ ಎಂದು ತಿಳಿದು ಬಂದಿದೆ.

ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಫಿರ್ಯಾದಿದಾರರಾದ ಪ್ರೇಮಲತಾ (58) ಸಾಣೂರು ಗ್ರಾಮ್ ಕಾರ್ಕಳ ತಾಲೂಕು ಇವರು ಕೆ.ಎಮ್‌.ಸಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡಿಕೊಂಡಿದ್ದು, ಕಳೆದ ಮೇ ತಿಂಗಳಲ್ಲಿ ನಿವೃತ್ತಿ ಹೊಂದಿ ಮನೆಯಲ್ಲಿರುತ್ತಾರೆ. ಪಿರ್ಯಾದಿದಾರರು ಯುನಿಯನ್‌ ಬ್ಯಾಂಕ್‌ ಖಾತೆ ಹೊಂದಿದ್ದು, ದಿನಾಂಕ 26/06/2025 ರಂದು ಪಿರ್ಯಾದಿದಾರರು ಮುಂಬೈಗೆ ಹೋಗುವರೇ ಟ್ರೈನ್‌ನಲ್ಲಿ ಹೋಗುತ್ತಿರುವಾಗ ಸಂಜೆ 4:30 ಗಂಟೆಗೆ 7076260938 ನಂಬರ್‌ನಿಂದ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಕಾರ್ಕಳ ಸಾಣೂರು ಬ್ರಾಂಚ್‌ ಯುನಿಯನ್‌ ಬ್ಯಾಂಕ್‌ನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ನಿಮ್ಮ ಕೆವೈಸಿ ಅಪ್‌ಡೇಟ್‌ ಮಾಡಲು ಇದೆ ನಿಮ್ಮ ಅಕೌಂಟ್‌ ನಂಬ್ರ ಹೇಳಿ ಎಂದು ಕೇಳಿದ್ದು, ಪಿರ್ಯಾದಿದಾರರು ತನಗೆ ಅಕೌಂಟ್‌ ನಂಬ್ರ ನೆನಪಿಲ್ಲ ಎಂದು ಹೇಳಿದಾಗ ಡೆಬೀಟ್‌ ಕಾರ್ಡ್‌ ನಂಬ್ರ ಹೇಳುವಂತೆ ತಿಳಿಸಿದ್ದು, ಪಿರ್ಯಾದಿದಾರರು ಆ ವ್ಯಕ್ತಿ ಬ್ಯಾಂಕ್‌ನಿಂದ ಮಾತನಾಡುವುದೆಂದು ನಂಬಿ ತನ್ನ ಡೆಬಿಟ್‌ ಕಾರ್ಡ್‌ ನಂಬ್ರ ಹೇಳಿರುತ್ತಾರೆ. ನಂತರ ಪುನಃ ಅದೇ ನಂಬರ್‌ನಿಂದ ಅದೇ ವ್ಯಕ್ತಿ ಕರೆ ಮಾಡಿ ಕೆವೈಸಿ ಅಪ್‌ಡೇಟ್‌ ಆಗಿರುವುದಾಗಿ ತಿಳಿಸಿದ್ದು, ದಿನಾಂಕ 26/06/2025 ರಂದು ರಾತ್ರಿ 8:18 ಗಂಟೆಗೆ ಪಿರ್ಯಾದಿದಾರರ ಯುನಿಯನ್‌ ಬ್ಯಾಂಕ್‌ ಖಾತೆಯಿಂದ 2,50,000/- , 8.24 ಗಂಟೆಗೆ 2,50,000/- ಹಾಗೂ ರಾತ್ರಿ 9:00 ಗಂಟೆಗೆ 19,000/- ಒಟ್ಟು 5,19,000/- ಹಣ ಕಡಿತಗೊಂಡಿರುತ್ತದೆ. ಯಾರೋ ಅಪರಿಚಿತ ವ್ಯಕ್ತಿ ಯುನಿಯನ್‌ ಬ್ಯಾಂಕ್‌ನಿಂದ ಮಾತನಾಡುವುದಾಗಿ ನಂಬಿಸಿ ಪಿರ್ಯಾದಿದಾರರಿಂದ ಡೆಬಿಟ್‌ ಕಾರ್ಡ್‌ ನಂಬ್ರ ಪಡೆದುಕೊಂಡು ಪಿರ್ಯಾದಿದಾರರ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿರುವುದಾಗಿದೆ.

ಈ ಬಗ್ಗೆ ಸೆನ್‌ ಅಪರಾಧ ಕ್ರಮಾಂಕ 32/2025 ಕಲಂ: 66(ಸಿ), 66(ಡಿ)ಐ.ಟಿ. ಆಕ್ಟ್‌ ಮತ್ತು 318(4)ಬಿಎನ್‌ಎಸ್‌ ರಂತೆ ಪ್ರಕರಣ ದಾಖಲಾಗಿರುತ್ತದೆ