ಉಡುಪಿ : ಜಿಲ್ಲೆಯ ಇಂಟಕ್ ಘಟಕವು ಅತ್ಯಂತ ಚುರುಕಾಗಿ ಹೆಚ್ಚು ಚಟುವಟಿಕೆಯಿಂದ ಕೆಲಸ ಮಾಡುತ್ತಿದೆ. ಇದನ್ನು ರಾಜ್ಯ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಸಹ ಗಮನಿಸುತ್ತಿದ್ದಾರೆ ಎಂದು ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ರತ್ನಾಕರ್ ಪೂಜಾರಿ ಹೇಳಿದ್ದಾರೆ.
ಅವರು ಪತ್ರಿಕಾ ಹೇಳಿಕೆಯ ಮೂಲಕ ಜಿಲ್ಲಾ ಇಂಟಕ್ ಘಟಕವು ಮಾಡುತ್ತಿರುವ ಸಾಧನೆಯ ವಿವರವನ್ನು ತಿಳಿಸಿದ್ದಾರೆ. ಹೊಸ ಮುಖಗಳನ್ನು ಇಂಟಕ್ ಮೂಲಕ ಸಂಘಟನೆಯನ್ನು ಬಲಪಡಿಸಲು ಪರಿಚಯಿಸಲಾಗುತ್ತಿದ್ದು, ಹೊಸ ಹೊಸ ಯುವ ನಾಯಕತ್ವವನ್ನು ಇಂಟಕ್ ಮೂಲಕ ಕಾಂಗ್ರೆಸ್ ಕೆಲಸವನ್ನು ಜಿಲ್ಲಾ ಇಂಟಕ್ ಘಟಕವು ಮಾಡುತ್ತಿರುವುದು ಪ್ರಶಂಸಾರ್ಹವಾಗಿದೆ. ಇಂಟಕ್ ಮಹಿಳಾ ಘಟಕವನ್ನು ಬಲಪಡಿಸಲಾಗಿದೆ. ಜಿಲ್ಲೆಯ ಎಲ್ಲಾ ಬ್ಲಾಕ್ ಅಧ್ಯಕ್ಷರನ್ನ ಅತ್ಯಂತ ಕ್ರಿಯಾಶೀಲ ನಾಯಕರನ್ನು ನೇಮಿಸಲಾಗಿದೆ. ಚುರುಕಾಗಿ ಮತ್ತು ಸಂಘಟನಾ ಕೌಶಲ್ಯವನ್ನು ಹೊಂದಿರುವಂತಹ ಯುವಕರನ್ನೇ ಆ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಇಂಟೆಕ್ ಜಿಲ್ಲಾಧ್ಯಕ್ಷರ ಬದ್ಧತೆಗೆ ಸಾಕ್ಷಿಯಾಗಿದೆ.
ಜೊತೆಗೆ ಅಸಂಘಟಿತ ಕಾರ್ಮಿಕರನ ಚಾಲಕರ ಸಂಘ ಹಾಗೂ ಕಾರ್ಮಿಕ ಇಲಾಖೆ ಒಳಪಟ್ಟ ಅಸಂಘಟಿತ ಕಾರ್ಮಿಕರ ಸಂಘ ಇವುಗಳನ್ನು ಒಗ್ಗೂಡಿಸಿ ಮುಖ್ಯ ವಾಹಿನಿಗೆ ತರುವಂತಹ ಕೆಲಸ ಕೂಡ ಇಂಟಕ್ ನಿಂದ ಆಗುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಕಡೆಗೆ ಹೊಸ ಮುಖ ಹಾಗೂ ಯುವ ಜನಾಂಗ ಆಕರ್ಷಿತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಆ ಕೆಲಸವನ್ನು ಇಂಟಕ್ ತನ್ನ ಕಾರ್ಯವೈಕರಿಯ ಮೂಲಕ ಹಂತ ಹಂತವಾಗಿ ಮಾಡುತ್ತಾ ಬರುತ್ತಿದೆ. ಹಾಗಾಗಿ ಪಕ್ಷದ ಘಟಕದಲ್ಲಿ ಒಂದಾದ ಇಂಟಕ್ ನ ಜಿಲ್ಲಾ ಘಟಕಕ್ಕೆ ಇನ್ನೂ ಹೆಚ್ಚಿನ ಪಕ್ಷದ ನಾಯಕರು ನೀಡಿದರೆ ಪಕ್ಷಕ್ಕೆ ದೊಡ್ಡ ಬಲವನ್ನು ಉಡುಪಿ ಜಿಲ್ಲಾ ಘಟಕವು ತಂದು ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ರತ್ನಾಕರ್ ಪೂಜಾರಿ ಅವರು ತಮ್ಮ ಪತ್ರಿಕ ಹೇಳಿಕೆಯ ಮೂಲಕ ತಿಳಿಸಿದ್ದಾರೆ.



