Home Latest ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಜೂನ್ 1 ರಿಂದ ಜೂನ್ 6 ರವರೆಗೆ ಉಚಿತ...

ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಜೂನ್ 1 ರಿಂದ ಜೂನ್ 6 ರವರೆಗೆ ಉಚಿತ ತಂಬಾಕು ವ್ಯಸನ ನಿವಾರಣಾ ಶಿಬಿರ ಆಯೋಜನೆ…!!

ಉಡುಪಿ: ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಜೂನ್ 1 ರಿಂದ ಜೂನ್ 6, 2026 ರವರೆಗೆ ಉಚಿತ ತಂಬಾಕು ವ್ಯಸನ ನಿವಾರಣಾ ಹೊರರೋಗಿ ಶಿಬಿರವನ್ನು ಆಯೋಜಿಸಲಾಗಿದೆ.

ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಜರ್ದಾ, ಸಿಗರೇಟ್, ಗುಟ್ಕಾ, ನಶ್ಯ ಪುಡಿ, ಎಲೆ ಅಡಿಕೆ ತಂಬಾಕು, ಬೀಡಿ, ಹುಕ್ಕಾ ಹಾಗೂ ಪಾನ್ ಮಸಾಲಾ ಸೇವನೆಯಂತಹ ತಂಬಾಕು ವ್ಯಸನಗಳಿಂದ ಮುಕ್ತರಾಗಲು ಬಯಸುವವರಿಗೆ ಉಚಿತ ಸಲಹೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ತಂಬಾಕು ಸೇವನೆಯನ್ನು ತ್ಯಜಿಸುವ ಸಂದರ್ಭದಲ್ಲಿ ಮನಸ್ಸಿಗೆ ಕಿರಿಕಿರಿ, ಆತಂಕ, ಅಸಹನೆ, ನಿದ್ರಾಹೀನತೆ, ಏಕಾಗ್ರತೆಯ ಕೊರತೆ, ಹಸಿವು ಹೆಚ್ಚಾಗುವುದು, ತಲೆನೋವು ಸೇರಿದಂತೆ ವಿವಿಧ ಹಿಂತೆಗೆತ ಲಕ್ಷಣಗಳು ಕಂಡುಬರಬಹುದು. ಆದರೆ ಸರಿಯಾದ ಚಿಕಿತ್ಸೆ, ಕೌನ್ಸೆಲಿಂಗ್ ಮತ್ತು ನಿರಂತರ ಬೆಂಬಲದ ಮೂಲಕ ಈ ವ್ಯಸನದಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವೆಂದು ತಜ್ಞರು ತಿಳಿಸಿದ್ದಾರೆ.

ಶಿಬಿರದಲ್ಲಿ ತಜ್ಞ ವೈದ್ಯರ ಸಲಹೆ, ಮನೋವೈದ್ಯಕೀಯ ಮಾರ್ಗದರ್ಶನ, ವ್ಯಸನ ನಿವಾರಣಾ ಕೌನ್ಸೆಲಿಂಗ್, ಆರೋಗ್ಯ ತಪಾಸಣೆ, ಕುಟುಂಬ ಸದಸ್ಯರಿಗೆ ಜಾಗೃತಿ ಮಾಹಿತಿ, ಪ್ರೇರಣಾತ್ಮಕ ಮಾರ್ಗದರ್ಶನವನ್ನು ನೀಡಲಾಗುವುದು.

ತಂಬಾಕು ಸೇವನೆಯು ಬಾಯಿ ಕ್ಯಾನ್ಸರ್, ಹೃದಯ ರೋಗಗಳು, ಉಸಿರಾಟದ ಸಮಸ್ಯೆಗಳು, ರಕ್ತದೊತ್ತಡ ಹೆಚ್ಚಳ ಹಾಗೂ ಹಲ್ಲು ಮತ್ತು ಬಾಯಿ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆಸ್ಪತ್ರೆ ಮನವಿ ಮಾಡಿದೆ.

ಇದಲ್ಲದೆ ಆಸ್ಪತ್ರೆಯಲ್ಲಿ ಮಾನಸಿಕ ಕಾಯಿಲೆಗಳು ಹಾಗೂ ಸಾರಾಯಿ, ತಂಬಾಕು, ಗಾಂಜಾ ಸೇರಿದಂತೆ ವಿವಿಧ ಅಮಲು ಪದಾರ್ಥಗಳ ವ್ಯಸನ ವಿಮುಕ್ತಿ ಚಿಕಿತ್ಸೆಗೆ ESI ಸೌಲಭ್ಯವೂ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 92428 21515 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ತಿಳಿಸಿದ್ದಾರೆ.