ಅಜೆಕಾರು : ಅಜೆಕಾರು ಕಡೆಯಿಂದ ಕಾಡುಹೊಳೆ ಕಡೆಗೆ ಮೇ 26 ರಂದು ಸಂಚರಿಸುತ್ತಿದ್ದ ಕಾರು ಗುಡ್ಡೆಯಂಗಡಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದ ಚರಂಡಿಯಲ್ಲಿ ಮಗುಚಿ ಬಿದ್ದಿದ್ದು ಸ್ಥಳೀಯರು ಸೇರಿ ಕಾರಿನಲ್ಲಿದ್ದ ಜಗದೀಶ್ ಶೆಟ್ಟಿ ಆಯುಶ್ ಶೆಟ್ಟಿ ಹಾಗೂ ಸತ್ಯ ಶಂಕರ್ ಅವರನ್ನು ಕಾರಿನಿಂದ ಹೊರ ತೆಗೆದಿದ್ದಾರೆ.
ಸತ್ಯಶಂಕರ್ ಅವರಿಗೆ ಸ್ವಲ್ಪ ಪ್ರಮಾಣದ ಗಾಯವಾಗಿದ್ದು ಕಾರು ಜಖಂಗೊಂಡಿದೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




