ಬೆಳ್ತಂಗಡಿ : ಮಡಂತ್ಯಾರು, ಬೆಳಾಲು ಸಿಎ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಶಾಂತ್ ಮೇಲೆ ವಿಶ್ವೇಶ್ ಗೌಡ ಎಂಬಾತ ಹಲ್ಲೆ ನಡೆಸಿ, ಗಾಯಗೊಳಿಸಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ಪ್ರಶಾಂತ್ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಬಗ್ಗೆ ದೂರುದಾರ ಆರೋಪಿ ಬಂದಾರು ಗ್ರಾಮದ ಬೈದ್ರೋಟ್ಟು ನಿವಾಸಿ ಪ್ರಶಾಂತ್ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಅನುಮತಿಯ ಆದೇಶ ದೊರೆತ ಬಳಿಕ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಾಲು ಸೊಸೈಟಿಗೆ ಎ.22 ರಂದು ಬಂದಿದ್ದ ಪ್ರಶಾಂತ್ ತನ್ನ ಕೆಲಸ ಮುಗಿಸಿ ಸೊಸೈಟಿಯಿಂದ ಹೊರಗೆ ಬಂದಾಗ ಸೊಸೈಟಿ ವಠಾರದಲ್ಲಿದ್ದ ತನ್ನ ಪರಿಚಯದ ವಿಶ್ವೇಶ್ ಗೌಡ ಎಂಬಾತ ಪ್ರಶಾಂತ್ ಬಳಿ ಬಂದು ನನ್ನ ಬಂಗಾರ ಎಲ್ಲಿ ಎಂದು ಜಗಳ ತೆಗೆದು ಕೈಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಆರೋಪಿ ವಿಶ್ವೇಶ್ ಗೌಡ ಕೈಯಿಂದ ಹಲ್ಲೆ ಮಾಡಿದಾಗ ಪ್ರಶಾಂತ್ ಕೈ ಅಡ್ಡ ಇಟ್ಟಾಗ ಆತನ ಕೈ ಬೆರಳಿಗೆ ಗಾಯವಾಗಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




