Home Crime ವಿಟ್ಲ : 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ…!!

ವಿಟ್ಲ : 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ…!!

ವಿಟ್ಲ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎರಡು ಪ್ರಕರಣದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಅಶ್ರಫ್ ಯಾನೆ ಚಿಲ್ಲಿ ಅಶ್ರಫ್(32) ಬಂಧಿತ ಆರೋಪಿ.

ವಿಟ್ಲ ಪೇಟೆಯಲ್ಲಿ ದಿನಾಂಕ 07-08-2015ರಂದು ಜಗದೀಶ್ ಕಾಮತ್ ಎಂಬವರಿಗೆ ಮೆಣಸಿನ ಪುಡಿ ಎರಚಿ, ದರೋಡೆ ಮಾಡಿದ ಆರೋಪಿ ಅಶ್ರಫ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಅದೇ ರೀತಿ ದಿನಾಂಕ 23-01-2016ರಂದು ಕೊಳ್ನಾಡು ಗ್ರಾಮದ ವೈನ್ ಶಾಪ್ ಬಾಗಿಲು ಮುರಿದು ನಗದು ಕಳ್ಳತನ ಮಾಡಿದ್ದ ಈತನ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿತ್ತು.

ಎರಡೂ ಪ್ರಕರಣಗಳಲ್ಲಿ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದ ಈತನ ಬಗ್ಗೆ ನ್ಯಾಯಾಲಯದಿಂದ 82 & 83 ವಾರಂಟ್ ಜಾರಿಯಾಗಿತ್ತು.

ಮಂಜೇಶ್ವರ ತಾಲೂಕು ಕೂಳೂರು ಗ್ರಾಮ ಅಶ್ರಫ್ ನನ್ನು ದಿನಾಂಕ 21-09-2025ರಂದು ಕೂಳೂರು ಮಂಜೇಶ್ವರ ಎಂಬಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.