Home Latest ಉಡುಪಿ : ಶ್ರೀ ಕೃಷ್ಣ ಮಠದ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರ ಆಕ್ರೋಶ…!!

ಉಡುಪಿ : ಶ್ರೀ ಕೃಷ್ಣ ಮಠದ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರ ಆಕ್ರೋಶ…!!

ಉಡುಪಿ : ಶ್ರೀ ಕೃಷ್ಣ ಮಠದ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪ್ರತಿ ನಿತ್ಯ ಶ್ರೀ ಕೃಷ್ಣನ ದರ್ಶನ ಪಡೆಯುವ ಸ್ಥಳೀಯ ಭಕ್ತರಿಗೆ ಇದೀಗ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಶ್ರೀ ಕೃಷ್ಣ ಮಠಕ್ಕೆ ಪ್ರತಿದಿನ ಆಗಮಿಸುವ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರೀ ಕೃಷ್ಣ ಮಠದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರವೀಂದ್ರ ಹೆಬ್ಬಾರ್ ಅವರು ದೇವಸ್ಥಾನಕ್ಕೆ ಯಾರೇ ಆಗಮಿಸಿದ್ದರು ಕೂಡ ಕರೆಯನ್ನ ಸ್ವೀಕರಿಸ್ದೆ ದಬ್ಬಾಳಿಕೆಯನ್ನು ತೋರಿಸುತ್ತಿದ್ದಾರೆ.

ಮಧ್ವ ಪರಂಪರೆಯಲ್ಲಿ ಸ್ವಾಮಿಜಿಯ ತಂದೆ ದಿವಾನರಾಗುವಂತಿಲ್ಲ. ಶಿರೂರು ಮಠದ ಸ್ವಾಮೀಜಿಯವರ ತಂದೆಯಾದ ಉದಯ ಕುಮಾರ್ ಸರಳತ್ತಾಯ ಮಠದ ದಿವಾನರಾಗಿದ್ದಾರೆ. ಈ ಹಿಂದೆ ಕೂಡ ಕೆಲವು ಮಠದ ಶ್ರೀಗಳ ತಂದೆಯವರು ದಿವಾನರಾಗಿದ್ದರು.

ಸೆಕ್ಯೂರಿಟಿ ಇನ್ ಚಾರ್ಜ್ ರಾಮಕೃಷ್ಣ ಒಕುಡೆ ಹಾಗೂ ಸಿಬ್ಬಂಧಿಗಳು ಪ್ರತಿನಿತ್ಯ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತಾಧಿಗಳ ಮೇಲೆ ದರ್ಪ ತೋರಿಸುತ್ತಿದ್ದಾರೆ. ಕೃಷ್ಣ ಮಠದಲ್ಲಿ ಈಗ ಎಲ್ಲಾದಕ್ಕೂ‌ ಹಣ ಪಾವತಿಸಬೇಕು. ಕೃಷ್ಣ ಮಠಕ್ಕೆ ವಿಐಪಿ ಗಳು ಬಂದರೆ ಇಲ್ಲಿ ಕೇಳುವರೇ ಇಲ್ಲ.

ಶನಿವಾರ ಇಲ್ಲಿ ಸ್ಥಳೀಯ ಭಕ್ತರು ಮುಖ್ಯಪ್ರಾಣ ದೇವರ ದರ್ಶನ ಮಾಡಿ ನೆಲದಲ್ಲಿ ಊಟ ಮಾಡುವ ಕ್ರಮ ಇದೆ.ಈಗ ಸ್ಥಳೀಯ ಭಕ್ತರು ಕೂಡ ದೇವರ ದರ್ಶನ ಮಾಡ ಬೇಕಾದರೆ ಸಾಲು ನಿಲ್ಲಬೇಕು , ಇಲ್ಲವಾದರೆ 500 ರೂ. ಕೊಟ್ಟು ಸ್ಪೆಷಲ್ ದರ್ಶನ ಮಾಡಬೇಕು.

ಶಿರೂರು ಮಠದ ಈ ಅವ್ಯವಸ್ಥೆಯ ಬಗ್ಗೆ ಸ್ಥಳೀಯ ಗಣ್ಯರು ಹಾಗೂ ದಿನ ನಿತ್ಯ ಬರುವ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿರೂರು ಮಠದ ಪರ್ಯಾಯ ಸ್ವಾಗತ ಸಮಿತಿ ಹಾಗೂ ಉಡುಪಿ ಶಾಸಕರು ಇದರ ಬಗ್ಗೆ ಗಮನ ಹರಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ.

ಶಿರೂರು ಮಠದ ಸ್ವಾಮೀಜಿಗಳು ಇತ್ತ ಕಡೆ ಗಮನ ಹರಿಸಬೇಕು ಈ ಅವ್ಯವಸ್ಥೆಯನ್ನ ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.