Home Karkala News ಹೆಬ್ರಿ :  ಮನೆಗೆ ನುಗ್ಗಿ ಸುಮಾರು 60 ಲಕ್ಷ ಮೌಲ್ಯದ ಚಿನ್ನಾಭರಣ  ಕಳ್ಳತನ..!

ಹೆಬ್ರಿ :  ಮನೆಗೆ ನುಗ್ಗಿ ಸುಮಾರು 60 ಲಕ್ಷ ಮೌಲ್ಯದ ಚಿನ್ನಾಭರಣ  ಕಳ್ಳತನ..!

ಸಾಂದರ್ಭಿಕ ಚಿತ್ರ

ಹೆಬ್ರಿ: ಹೆಬ್ರಿ ಯಲ್ಲಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಮನೆಯೊಂದರಲ್ಲಿ ನುಗ್ಗಿದ ಕಳ್ಳರು ಸುಮಾರು 59.97 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಕೀರ್ತನ ಪ್ರಭು (34) ಅವರು ಮೇ 24ರಂದು ಬೆಳಿಗ್ಗೆ 6:45ರ ಸುಮಾರಿಗೆ ಎದ್ದು ನೋಡಿದಾಗ ಮನೆಯ ಹಿಂಭಾಗ ಹಾಗೂ ಎದುರಿನ ಬಾಗಿಲುಗಳು ತೆರೆದಿರುವುದು ಗಮನಕ್ಕೆ ಬಂದಿದೆ. ಹಾಲ್ ಬಳಿ ಇದ್ದ ಗಾಡ್ರೇಜ್ ಬಾಗಿಲು ಸಹ ತೆರೆದಿರುವುದನ್ನು ಕಂಡು ಅನುಮಾನಗೊಂಡ ಅವರು ಮೊದಲ ಮಹಡಿಯ ಮಲಗುವ ಕೋಣೆಗೆ ತೆರಳಿ ಪರಿಶೀಲಿಸಿದಾಗ, ಅಲ್ಲಿದ್ದ ಕಬ್ಬಿಣದ ಗಾಡ್ರೇಜ್ ಲಾಕರ್‌ ಕೂಡ ಮುರಿದು ತೆರೆದಿರುವುದು ಪತ್ತೆಯಾಗಿದೆ.

ಕಳ್ಳರು ಮನೆಯ ಹಿಂಭಾಗದ ಕಿಟಕಿಯ ಚಿಲಕದ ಕೊಂಡಿಯನ್ನು ಮೀಟಿ ಒಳನುಗ್ಗಿ, ಮೊದಲ ಮಹಡಿಯಲ್ಲಿ ಇರಿಸಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಸೇರಿದಂತೆ ಇತರ ಬೆಲೆಬಾಳುವ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.

ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು 59 ಲಕ್ಷ 97 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದ

ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.