ಹಿರಿಯಡ್ಕ : ಉಡುಪಿ ಜಿಲ್ಲೆಯ ಹಿರಿಯಡಕ ಬೊಮ್ಮರಬೆಟ್ಟು ಸೊಸೈಟಿಯಲ್ಲಿ ಅಕ್ಕಿ ಗಾಗಿ ದಿನಗಟ್ಟಲೆ ಕಾಯುತ್ತಾ ನಿಲ್ಲೋದು ಮೊದಲಿನಿಂದಲೂ ಇದೆ. ಇತ್ತೀಚೆಗಂತೂ ಸಮಸ್ಯೆ ವಿಪರೀತಕ್ಕೆ ಹೋಗಿದೆ.

“ಹೆಬ್ಬೆಟ್ಟು ವರ್ಕ್ ಆಗುತ್ತಿಲ್ಲ-ಸರ್ವರ್ ವರ್ಕ್ ಆಗುತ್ತಿಲ್ಲ” ಬೆಳಿಗ್ಗೆಯಿಂದ ಸಂಜೆತನಕ ಕಾಯುತ್ತಾ ನಿಂತು ಅಕ್ಕಿ ಸಿಗದೆ ವಾಪಸ್ ಹೋಗ್ತಾರೆ. 3 ದಿನ 6 ದಿನ ಕಾಯುತ್ತಾ ನಿಂತು ಬೇಸತ್ತು ವಾಪಸು ಹೋಗಿದ್ದಾರೆ. ಬಡವರು, ರೋಗಿಗಳು, ಕಾಲು ನೋವಿನವರು ಕೂಡ ನಿಲ್ಲಬೇಕಾಗಿದೆ.

ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ನೆಲದಲ್ಲಿ ರಾಶಿ ಹಾಕಿದ ಕಲ್ಲುಗಳ ಮೇಲೆ ಕುಳಿತುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆ ಕಲ್ಲುಗಳು ಯಾವ ಕ್ಷಣದಲ್ಲೂ ಜಾರಿ ಕಾಲಿನ ಮೇಲೆ ಬೀಳುವ ಹಾಗಿದೆ.
ಮಳೆಗಾಲದಲ್ಲಿ ಬಾಗಿಲಲ್ಲೇ ನೀರು ನಿಲ್ಲುತ್ತದೆ. ಮಾಡು ಸೋರುತ್ತದೆ. ರಿಕ್ಷಾಗಳು ಓಡಾಡಲಾಗದ ಹಾಗೆ ದೊಡ್ಡ ದೊಡ್ಡ ಹೊಂಡಗಳು ಇವೆ. ಜನರು ಕ್ಯೂ ನಿಂತಾಗ ಸಿಡಿಲು ಬಡಿಯುವ ಸಂಭವ ಇದೆ ಯಾಕೆಂದರೆ ಕಟ್ಟಡದ ಪಕ್ಕಕ್ಕೆ ದೊಡ್ಡ ಟವರ್ ಇದೆ.
ಸೊಸೈಟಿ ಅಕ್ಕಿ ಕೂಡಿ ಇಟ್ಟ ಕೋಣೆ ಚೆನ್ನಾಗಿಲ್ಲ. ಸಿಮೆಂಟ್ ಶೀಟು ಹಾಕಿದ ಮಾಡು ಹಾಗೂ ನೆಲ ಹೊರಗಿನ ನೆಲಕ್ಕೆ ಸಮಾಂತರವಾಗಿದೆ. ಬಾಗಿಲಲ್ಲಿ ಜನರ ಕಾಲಿನಿಂದ ಮಣ್ಣು ಅಕ್ಕಿ ರೂಮಿಗೆ ಹೋಗುತ್ತದೆ ಬಾಗಿಲಲ್ಲಿ ಉದ್ದಕ್ಕೆ ಸಿಮೆಂಟ್ ಹಾಕಬೇಕಿತ್ತು. ಮಾಡು ಕೂಡ ಇರಬೇಕಿತ್ತು. ರೂಮಿಂದ ಹೊರಗೆ ಅಕ್ಕಿ ತರುವಾಗ ತುಂಬಾಅಕ್ಕಿ ಚೆಲ್ಲಿ ಮಣ್ಣಿನಲ್ಲಿ ಸೇರಿದೆ.ಹಕ್ಕಿ ಪಕ್ಷಿಗಳಿಗೂ ತಿನ್ನಲಾಗದು.

ದಿನ ಕೂಲಿ ಕೆಲಸಕ್ಕೆ ಹೋಗುವವರು ದಿನಕ್ಕೆ 1000 ದುಡಿಯುತ್ತಾರೆ. ಇಲ್ಲಿ 5 ದಿನ ಕ್ಯೂನಲ್ಲಿ ನಿಂತರೆ 5000 ನಷ್ಟ. ಹೀಗೇ 100 ಜನರು x 5000Rs=5 ಲಕ್ಷ ನಷ್ಟ ಸಾವಿರಾರು ಜನರಿಗೆ ಸಾವಿರಾರು ಲಕ್ಷಗಳ ನಷ್ಟ. ಸರ್ಕಾರಕ್ಕೆ ಅರ್ಥ ಆಗುತ್ತಿಲ್ಲವೇ?

76250 94910 ರೈತರ ಸಹಕಾರಿ ಸಂಘ ಲಿಮಿಟೆಡ್ ಹಿರಿಯಡ್ಕ ಪ್ರಧಾನ ಕಛೇರಿ 576113 DRGS 2564\76\77
ಇವರಿಗೆ ನಾವು ಸೊಸೈಟಿ ಕ್ಯೂನಲ್ಲಿ ನಿಂತುಕೊಂಡೇ ಫೋನ್ ಮಾಡಿ,ಕಷ್ಟ ಹೇಳಿದಾಗ ಅವರು ಹೇಳಿದ್ದು ಹೀಗೆ
“ಅದಕ್ಕೆ ಪರಿಹಾರ ಇಲ್ಲ. ಕ್ಯುನಿಲ್ಲಲು ನಿಮಗೆ ಕಷ್ಟ ಆದರೆ ಅಕ್ಕಿಗೆ ಬರೋದೇ ಬೇಡ* ಎಂದರು…
ಇಲ್ಲಿಎಷ್ಟೋ ಜನರು ಸುಸ್ತಾಗಿ ಅಕ್ಕಿ ಬೇಡವೆಂದು ಬಿಟ್ಟು ಹೋದರು! ಹಾಗಾದರೆ ನಮ್ಮ ಪಾಲಿನ ಅಕ್ಕಿ ಇವರೇನು ಮಾಡುತ್ತಾರೆ.? ಎಂದು ಕ್ಯೂನಲ್ಲಿ ನಿಂತ ಜನ ಪ್ರಶ್ನಿಸುತ್ತಿದ್ದಾರೆ.

ಕೂಪನ್ ಅಥವಾ ಚೀಟಿಕೊಟ್ಟು ದಿನಕ್ಕೆ ಇಂತಿಷ್ಟೇ ಜನ ಬನ್ನಿ. ಅಂತ ಏನಾದರೂ ಐಡಿಯಾ ಕೊಡಿ, ಆಗ ಯಾರೂ ಕಾಯುವ ಅಗತ್ಯ ಇಲ್ಲ ಎಂದು ಕ್ಯೂ ನಲ್ಲಿ ನಿಂತ ಒಬ್ಬರು ಮಹಿಳೆ ಹೇಳಿದರು.
ಅಕ್ಕಿಯ ಬೆಲೆಗಿಂತ 10 ಪಟ್ಟು ನಷ್ಟ ಜನರ ಜೀವನದ ಮೇಲೆ ಆಗುತ್ತಿದೆ. ಹಿಂದಿನ ಕಾಲದಲ್ಲಿ ಚೀಟಿ ಕೊಟ್ಟರೆ ಅಕ್ಕಿ ಸಿಗುತ್ತಿತ್ತು. ಈಗ ಕಂಪ್ಯೂಟರ್ ಬಳಕೆ ಸಮಸ್ಯೆ ಕೊಡುತ್ತಿದೆ*
ಅಂತಾದರೆ ಕಂಪ್ಯೂಟರ್ ಬೇಡ
ನೊಂದ ಜನರ ಈ ಸಂದೇಶವನ್ನು ನಿರ್ಲಕ್ಷ್ಯ ಮಾಡದೆ ಬೇಗ ಪರಿಹಾರ ಮಾಡಿಕೊಡಿ ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ಈ ಘಟನೆ ಬಗ್ಗೆ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಶಾಸಕರು ಗಮನ ಹರಿಸಿ ಸಮಸ್ಯೆಯನ್ನು ಪರಿಹರಿಸಬೇಕು. ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಪ್ರೈಮ್ ಟಿವಿಗೆ ತಿಳಿಸಿದ್ದಾರೆ.





