Home Crime ಮಂಗಳೂರು: ಪಾರ್ಕ್‌ ಮಾಡಿದ್ದ ಸ್ಕೂಟರ್‌ ಕಳವು…!!

ಮಂಗಳೂರು: ಪಾರ್ಕ್‌ ಮಾಡಿದ್ದ ಸ್ಕೂಟರ್‌ ಕಳವು…!!

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್‌ ಬಳಿಯ ಅಂಗಡಿಯೊಂದರ ಮುಂಭಾಗದಲ್ಲಿ ಪಾರ್ಕ್‌ ಮಾಡಿದ್ದ ಕೆಎ 19 ಎಚ್‌ಬಿ 4765 ನೋಂದಣಿಯ ಸುಜುಕಿ ಆ್ಯಕ್ಸೆಸ್‌ ಸ್ಕೂಟರ್‌ ಕಳುವಾಗಿದೆ.

ಡೆರಿಕ್‌ ಬ್ರೌನ್‌ ಎಂಬವರಿಗೆ ಸೇರಿದ ಸ್ಕೂಟರ್‌ ಆಗಿದ್ದು, ಸ್ಟೇಟ್‌ಬ್ಯಾಂಕ್‌ ಬಳಿಯ ಬದ್ರಿಯಾ ಕಾಲೇಜು ಜಂಕ್ಷನ್‌ನ ಅಂಗಡಿಯೊಂದರ ಮುಂಭಾಗ ಜೂ.20ರಂದು ಸಂಜೆ 6 ಗಂಟೆಗೆ ಸ್ಕೂಟರ್‌ ಪಾರ್ಕ್‌ ಮಾಡಿದ್ದು, 7.30ಕ್ಕೆ ಬಂದು ನೋಡಿಗಾಗ ಸ್ಕೂಟರ್‌ ಕಳವಾಗಿತ್ತು. ಆಸುಪಾಸು ಹುಡುಕಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.