Home Crime ಬಾರ್‌ನಲ್ಲಿ ಮದ್ಯಪಾನ ವೇಳೆ ಗಲಾಟೆ: ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

ಬಾರ್‌ನಲ್ಲಿ ಮದ್ಯಪಾನ ವೇಳೆ ಗಲಾಟೆ: ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

ಹಿರಿಯಡ್ಕ: ಅತ್ರಾಡಿಯ ಶ್ರೀನಿಧಿ ಬಾರ್‌ನಲ್ಲಿ ಮದ್ಯಪಾನ ಮಾಡುವ ವೇಳೆ ಉಂಟಾದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಮೂಡುಬೆಟ್ಟು ಗ್ರಾಮದ ಸುಭಾಷ್ ನಗರ ನಿವಾಸಿ ಸುದೀರ್ ಶೆಟ್ಟಿ (42) ಅವರು ಮೇ 23ರಂದು ಸಂಜೆ ಸುಮಾರು 5:30ರ ವೇಳೆಗೆ ಕೆಲಸ ಮುಗಿಸಿ ಮನೆಗೆ ತೆರಳುವಾಗ ಅತ್ರಾಡಿಯ ಶ್ರೀನಿಧಿ ಬಾರ್‌ಗೆ ಮದ್ಯಪಾನಕ್ಕಾಗಿ ತೆರಳಿದ್ದರು. ಈ ವೇಳೆ ಎದುರುಗಡೆ ಟೇಬಲ್‌ನಲ್ಲಿ ಕುಳಿತಿದ್ದ ಪರಿಚಯಸ್ಥ ಸುಂದರ ಎಂಬಾತ ಕುಡಿದ ಮತ್ತಿನಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಹತ್ತಿರದಲ್ಲಿದ್ದ ಬಿಯರ್ ಬಾಟಲಿಯಿಂದ ಸುದೀರ್ ಶೆಟ್ಟಿಯ ತಲೆ ಹಾಗೂ ಕೈಗೆ ಹೊಡೆದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಹಲ್ಲೆಯಿಂದ ಸುದೀರ್ ಶೆಟ್ಟಿಯ ತಲೆ ಮತ್ತು ಕೈಗೆ ರಕ್ತಗಾಯಗಳಾಗಿದ್ದು, ಅವರ ದೂರಿನ ಮೇರೆಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.