Home Crime ಹಂದಾಡಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮೃತ ಸ್ಥಿತಿಯಲ್ಲಿ ಪತ್ತೆ…!!

ಹಂದಾಡಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮೃತ ಸ್ಥಿತಿಯಲ್ಲಿ ಪತ್ತೆ…!!

ಬ್ರಹ್ಮಾವರ: ಹಂದಾಡಿ ಗ್ರಾಮದ ಬೆಣ್ಣೆಕುದ್ರು ಸೀತಾ ನದಿಯ ತೀರದಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.

ಪಿರ್ಯಾದಿದಾರರಾದ ಲಕ್ಷ್ಮಣ ಪೂಜಾರಿ (57), ಭಂಡಾರಿ ಮನೆ, ಹಂದಾಡಿ ಗ್ರಾಮ ಇವರೊಂದಿಗೆ ವಾಸವಾಗಿದ್ದ ಅವರ ಅಕ್ಕ ಸುಮಾರು 65 ವರ್ಷ ಪ್ರಾಯದ ಮೀನಾಕ್ಷಿ ಅವರು ದಿನಾಂಕ 19.05.2026 ರಂದು ಮಧ್ಯಾಹ್ನ 12:00 ಗಂಟೆಗೆ ಮನೆಯಿಂದ ತೆರಳಿದ್ದು ಬಳಿಕ ಮನೆಗೆ ವಾಪಾಸಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/2026ರಂತೆ ಹೆಂಗಸು ಕಾಣೆ ಪ್ರಕರಣ ದಾಖಲಾಗಿತ್ತು.

ನಂತರ ದಿನಾಂಕ 22.05.2026 ರಂದು ಬೆಳಿಗ್ಗೆ 6:30 ಗಂಟೆ ಸುಮಾರಿಗೆ ಹಂದಾಡಿ ಗ್ರಾಮದ ಬೆಣ್ಣೆಕುದ್ರು ಸೀತಾ ನದಿಯ ತೀರದಲ್ಲಿ ಮೀನಾಕ್ಷಿ ಅವರ ಮೃತದೇಹ ಪತ್ತೆಯಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮೀನಾಕ್ಷಿ ಅವರು ಮನೆ ಬಿಟ್ಟು ನದಿಯ ತಟದ ಕಡೆಗೆ ತೆರಳಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ವ್ಯಕ್ತವಾಗಿದೆ.

ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್‌ ಕ್ರಮಾಂಕ 35/2026 ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.